ADVERTISEMENT

ಕಪಿಲೆಯಲ್ಲಿ ಮುಳುಗಿ ಬೆಂಗಳೂರು ನಿವಾಸಿ ಸಾವು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 19:30 IST
Last Updated 18 ಮಾರ್ಚ್ 2012, 19:30 IST

ನಂಜನಗೂಡು: ಪಟ್ಟಣದ ಶ್ರೀಕಂಠೇಶ್ವರಸ್ವಾಮಿ ದೇವಾಲಯ ಸಮೀಪ  ಕಪಿಲಾ ನದಿಯ ಸ್ನಾನಘಟ್ಟದ ಬಳಿ ಈಜಲು ಹೋದ  ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಬೆಂಗಳೂರಿನ ಚೋಳರಪಾಳ್ಯ ನಿವಾಸಿ ರಮೇಶ್ (38) ಮೃತಪಟ್ಟವರು.
 
ಇವರು ಅಶೋಕ ಕುಮಾರ್, ನಾಗರಾಜು ಜತೆ ಆಗಮಿಸಿದ್ದರು.  ಬೆಳಿಗ್ಗೆ 7ಕ್ಕೆ ಸ್ನಾನ ಮಾಡಲು ಮೂವರೂ ತೆರಳಿದ್ದರು. ರಮೇಶ್ ಈಜಲು  ಸ್ವಲ್ಪ ದೂರ ಹೋದಾಗ ಮುಳುಗಿ ಮೃತಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.