ADVERTISEMENT

ಕಬ್ಬಾಳಮ್ಮ ದೇವಿ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:33 IST
Last Updated 4 ಮಾರ್ಚ್ 2018, 19:33 IST
ಕಬ್ಬಾಳಮ್ಮ ದೇವಿ ಬ್ರಹ್ಮರಥೋತ್ಸವ
ಕಬ್ಬಾಳಮ್ಮ ದೇವಿ ಬ್ರಹ್ಮರಥೋತ್ಸವ   

ಬೆಂಗಳೂರು: ಉತ್ತರಹಳ್ಳಿ ಸಮೀಪದ ಅರೇಹಳ್ಳಿಯಲ್ಲಿ ಇತಿಹಾಸ ಪ್ರಸಿದ್ಧ ಹನುಮಗಿರಿಯ ಕಬ್ಬಾಳಮ್ಮ ದೇವಿ ಬ್ರಹ್ಮರಥೋತ್ಸವ ವಿಜೃಂಭಣೆಯಲ್ಲಿ ನಡೆಯಿತು.

ಬ್ರಹ್ಮರಥೋತ್ಸವಕ್ಕೆ ಬಿಬಿಎಂಪಿ ಸದಸ್ಯ ಹನುಮಂತಯ್ಯ ಚಾಲನೆ ನೀಡಿದರು. ಪಂಚಾಮೃತ ಅಭಿಷೇಕ, ಗಣಪತಿ ಹೋಮ, ದುರ್ಗಾಹೋಮ, ಉಯ್ಯಾಲೋತ್ಸವ, ಶಯನೋತ್ಸವ ನಡೆದವು. ಪೂಜಾಕುಣಿತ, ಪಟ್ಟದ ಕುಣಿತ ಸೇರಿದಂತೆ ಹಲವಾರು ಕಲಾ ಪ್ರದರ್ಶನಗಳು ಜಾತ್ರಾ ಮಹೋತ್ಸವಕ್ಕೆ ಮೆರಗು ನೀಡಿದವು. ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯ ಕೆ. ರಮೇಶ್‍ರಾಜು, ಉತ್ತರಹಳ್ಳಿ ಸರ್ಕಾರಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯ್‍ಕುಮಾರ್‌ ಬಾಬು, ತಪೋವನ ಕ್ಷೇತ್ರ ದೇವಸ್ಥಾನಸಮಿತಿ ಅಧ್ಯಕ್ಷ ಪುರುಷೋತ್ತಮ, ಮಾಜಿ ಅಧ್ಯಕ್ಷ ವಿ.ಆಂಜನಪ್ಪ, ಪ್ರಧಾನ ಕಾರ್ಯದರ್ಶಿ ಗೋಪಾಲ್ ಅವರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.