ADVERTISEMENT

ಕಲಾಂ ಜನ್ಮದಿನಕ್ಕೆ 700 ಅಡಿ ಉದ್ದದ ಬಾವುಟ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST
ಕಲಾಂ ಜನ್ಮದಿನಕ್ಕೆ 700 ಅಡಿ ಉದ್ದದ ಬಾವುಟ ಪ್ರದರ್ಶನ
ಕಲಾಂ ಜನ್ಮದಿನಕ್ಕೆ 700 ಅಡಿ ಉದ್ದದ ಬಾವುಟ ಪ್ರದರ್ಶನ   

ಬೆಂಗಳೂರು: ಎನ್‌ಎಸ್‌ಯುಐ ಬೊಮ್ಮನಹಳ್ಳಿ ಘಟಕದ ವತಿಯಿಂದ ಹೊಸಪಾಳ್ಯದ ರಂಗಮಂದಿರದಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ 86ನೇ ಜನ್ಮದಿನ ಆಚರಿಸಲಾಯಿತು.

ವಿಧಾನ ಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ, ‘ಕಡುಬಡತನದಲ್ಲಿ ಬೆಳೆದು ಪ್ರಖ್ಯಾತ ವಿಜ್ಞಾನಿಯಾಗಿ, ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಕಲಾಂ ಅವರು ಬೆಳೆದ ಪರಿ, ಅವರ ಆದರ್ಶ ಬದುಕು ಅನನ್ಯವಾದುದು’ ಎಂದರು.

ಪರಿಸರವಾದಿ ಅ.ನ.ಯಲ್ಲಪ್ಪರೆಡ್ಡಿ, ಪಾಲಿಕೆ ಸದಸ್ಯೆ ಶೋಭಾ ಜಗದೀಶ್, ಕೆಪಿಸಿಸಿ ಮಹಿಳಾ ಘಟಕದ ಮುಖ್ಯಸ್ಥೆ ಕವಿತಾರೆಡ್ಡಿ ಮಾತನಾಡಿದರು. ಸಾಧಕ
ರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, 700 ಅಡಿ ಉದ್ದನೆಯ ರಾಷ್ಟ್ರ ಧ್ವಜ
ಪ್ರದರ್ಶಿಸಿ ಗಮನ ಸೆಳೆದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.