ADVERTISEMENT

ಕಲುಷಿತ ನೀರು:ಕೈದಿಗಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:40 IST
Last Updated 27 ಅಕ್ಟೋಬರ್ 2011, 19:40 IST

ಬೆಂಗಳೂರು: ಕಲುಷಿತ ನೀರು ಕುಡಿದ ಪರಿಣಾಮ ಇಪ್ಪತ್ತಕ್ಕೂ ಅಧಿಕ ವಾಂತಿ- ಭೇದಿ ಮಾಡಿಕೊಂಡು ಅಸ್ವಸ್ಥರಾದ ಘಟನೆ ಪರಪ್ಪನಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಗುರುವಾರ ನಡೆದಿದೆ.

ಬೆಳಿಗ್ಗೆ ತಿಂಡಿ ತಿಂದು ನೀರು ಕುಡಿದ ನಂತರ ಕೈದಿಗಳು ವಾಂತಿ ಮಾಡಿಕೊಂಡರು. ಆ ನಂತರ ಕೆಲವರಿಗೆ ಭೇದಿ ಸಹ ಆಗಿ ಅಸ್ವಸ್ಥಗೊಂಡರು. ಕೂಡಲೇ ಎಲ್ಲರಿಗೂ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಯಿತು.
 ಕಲುಷಿತ ನೀರಿನಿಂದ ಈ ರೀತಿ ಆಗಿದೆ ಎಂದು ಗೊತ್ತಾಗಿದೆ.

ಎಲ್ಲ ಕೈದಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ಬಿಸಿ ಮಾಡಿದ ನೀರು ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಕೈದಿಗಳೂ ಸುಧಾರಿಸಿಕೊಂಡಿದ್ದಾರೆ. ಅವರ ಆರೋಗ್ಯ ಸ್ಥಿತಿ ಚೆನ್ನಾಗಿದೆ. ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.