ADVERTISEMENT

ಕಾರು ಶುಲ್ಕ: ವಿರೋಧ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 20:25 IST
Last Updated 18 ಸೆಪ್ಟೆಂಬರ್ 2011, 20:25 IST

ಬೆಂಗಳೂರು: ರಾತ್ರಿ ವೇಳೆ ರಸ್ತೆಯಲ್ಲಿ ನಿಲುಗಡೆ ಮಾಡುವಂತಹ ಕಾರುಗಳಿಂದ ಶುಲ್ಕ ವಸೂಲಿ ಮಾಡುವ ಬಿಬಿಎಂಪಿ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಮೇಯರ್ ಎಂ. ರಾಮಚಂದ್ರಪ್ಪ, ಈ  ನಿರ್ಧಾರದಿಂದ ಪಾಲಿಕೆ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ.

`ಇದೊಂದು ಮೂರ್ಖತನದ ನಿರ್ಧಾರ. ಬಿಬಿಎಂಪಿ ಈ ಕ್ರಮಕ್ಕೆ ಮುಂದಾದಲ್ಲಿ ನಗರದ ನಾಗರಿಕರಿಂದ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ~ ಎಂದು ಅವರು ಎಚ್ಚರಿಸಿದ್ದಾರೆ.

`ನಾಗರಿಕರ ಹೋರಾಟಕ್ಕೆ ಮಣಿದು ದ್ವಿಚಕ್ರ ವಾಹನಗಳ ಶುಲ್ಕ ವಸೂಲಿ ಮಾಡುವುದನ್ನೇ ಕೈಬಿಟ್ಟ ಬಿಬಿಎಂಪಿ, ಇದೀಗ ರಾತ್ರಿ ವೇಳೆ ರಸ್ತೆಯಲ್ಲಿ ನಿಲ್ಲಿಸುವಂತಹ ಕಾರುಗಳಿಂದ ಶುಲ್ಕ ವಸೂಲಿ ಮಾಡಲು ಹೊರಟಿರುವುದು ಖಂಡನೀಯ. ಬಿಬಿಎಂಪಿಯಲ್ಲಿ ಸಂಪನ್ಮೂಲಕ್ಕೆ ಕೊರತೆಯಿಲ್ಲ. ದುಂದು ವೆಚ್ಚ ತಡೆಗೆ ಸಚಿವ ಆರ್. ಅಶೋಕ  ಚಿಂತಿಸಲಿ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.