ADVERTISEMENT

ಕಾಷ್ಠ ಶಿಲ್ಪಕಲಾ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 20:28 IST
Last Updated 9 ಜೂನ್ 2017, 20:28 IST
ಕಲಾವಿದ ರುಕ್ಕಪ್ಪ ಕುಂಬಾರ್‌ ಅವರು ಕಲಾಕೃತಿ ರಚನೆಯ ಕೆಲಸ ಆರಂಭಿಸಿದರು     –ಪ್ರಜಾವಾಣಿ ಚಿತ್ರ
ಕಲಾವಿದ ರುಕ್ಕಪ್ಪ ಕುಂಬಾರ್‌ ಅವರು ಕಲಾಕೃತಿ ರಚನೆಯ ಕೆಲಸ ಆರಂಭಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾ ಡೆಮಿ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮವು ಸ್ವಾಮಿ ವಿವೇಕಾನಂದ ಮೆಟ್ರೊ ನಿಲ್ದಾಣದ ಆವರಣದಲ್ಲಿ ಆಯೋಜಿಸಿರುವ ‘ಕಾಷ್ಠ ಶಿಲ್ಪಕಲಾ ಶಿಬಿರ’ಕ್ಕೆ ನಿಗಮದ ನಿರ್ದೇಶಕ ಎನ್‌. ಎಂ. ಧೋಕೆ ಅವರು ಶುಕ್ರವಾರ ಚಾಲನೆ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ 16 ಕಲಾವಿದರು ಶಿಬಿರದಲ್ಲಿ ಭಾಗವಹಿಸಿದ್ದಾರೆ. ತೇಗ ಮತ್ತು ಶಿವ ಹೊನ್ನೆ ಮರಗಳ ದಿಮ್ಮಿಗಳಲ್ಲಿ ಬೇಲೂರು ಶಿಲ್ಪಕಲೆಯಲ್ಲಿನ ಶಾಂತಲಾ, ಶುಕ ಭಾಷಿಣಿ, ದರ್ಪಣ ಸುಂದರಿ ಸೇರಿದಂತೆ ಹಲವಾರು ಮದನಿಕೆಯರ ಕಲಾ ಕೃತಿ ಗಳನ್ನು ಅವರು ಹೊಯ್ಸಳ ಶೈಲಿಯಲ್ಲಿ ಕಟ್ಟಿಗೆಯ ತುಂಡುಗಳಲ್ಲಿ ಮೂಡಿ ಸುತ್ತಿದ್ದಾರೆ.

‘ನಾನು 2 ಅಡಿ ಎತ್ತರದ ಶಾಂತಲಾ ಮೂರ್ತಿಯನ್ನು ತಯಾರಿಸುತ್ತಿದ್ದೇನೆ. ಇಂತಹ ಶಿಬಿರಗಳು ಜನಸಾಮಾನ್ಯರಿಗೆ ಕಲೆಯ ಕುರಿತು ತಿಳಿಯಲು ಸಹಕಾರಿ’ ಎಂದು ಮಂಡ್ಯದ ಕಲಾವಿದ ಎಚ್‌.ಕೆ. ಅಣ್ಣಯ್ಯಚಾರ್‌ ಹೇಳಿದರು.

ADVERTISEMENT

‘ಶಿಬಿರದಲ್ಲಿ ರಚಿಸಲಾಗುವ ಕಲಾ ಕೃತಿಗಳನ್ನು ಜೂನ್‌ 22ರಿಂದ 30ರವ ರೆಗೆ ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದ ರಂಗೋಲಿ ಕಲಾಕೇಂದ್ರದಲ್ಲಿ ಪ್ರದ ರ್ಶನಕ್ಕೆ ಇಡಲಾಗುತ್ತದೆ’ ಎಂದು   ರಿಜಿ ಸ್ಟ್ರಾರ್‌ ಎಚ್‌.ವಿ.ಇಂದ್ರಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.