ADVERTISEMENT

ಕಾಸರಗೋಡು ಕರ್ನಾಟಕಕ್ಕೆ ಸೇರಲಿ

‘ಕಯ್ಯಾರ ಕಿಞ್ಞಣ್ಣ ರೈ 100ರ ಸಂಭ್ರಮ’ದಲ್ಲಿ ಚಿದಾನಂದಮೂರ್ತಿ ಆಶಯ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 19:33 IST
Last Updated 24 ಡಿಸೆಂಬರ್ 2013, 19:33 IST
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಕಯ್ಯಾರ ಕಿಞ್ಞಣ್ಣ ರೈ 100 ಸಂಭ್ರಮ’ ಸಮಾರಂಭದಲ್ಲಿ ವಿಮರ್ಶಕ ಡಾ.ಬಸವರಾಜ ಕಲ್ಗುಡಿ ಅವರೊಂದಿಗೆ ಹಿರಿಯ ಸಂಶೋಧಕ ಡಾ.ಚಿದಾನಂದ ಮೂರ್ತಿ ಮಾತನಾಡಿದರು. ಕಿಞ್ಞಣ್ಣ ಅವರ ಅಳಿಯ ಭುವನ ಪ್ರಸಾದ ಹೆಗ್ಡೆ, ಮಂಗಳೂರು ಆಕಾಶವಾಣಿಯ ನಿರ್ದೇಶಕ ಡಾ.ವಸಂತಕುಮಾರ ಪೆರ್ಲ, ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ಚಿಂತಕ  ಡಾ.ರಮಾನಂದ ಬನಾರಿ,  ಲೇಖಕಿ ಡಾ. ಇಂದಿರಾ ಹೆಗ್ಡೆ ಉಪಸ್ಥಿತರಿದ್ದರು	–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕಯ್ಯಾರ ಕಿಞ್ಞಣ್ಣ  ರೈ ಅವರ ಶತಮಾನೋತ್ಸವದ ಈ ಹೊತ್ತಿ­ನಲ್ಲಾದರೂ ಕಾಸರಗೋಡು ಕರ್ನಾ­ಟಕಕ್ಕೆ ಸೇರುವಂತಾಗ ಬೇಕು’ ಎಂದು ಹಿರಿಯ ಸಂಶೋಧಕ ಡಾ.ಎಂ.­ಚಿದಾನಂದ ಮೂರ್ತಿ ಆಶಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಕಯ್ಯಾರ ಕಿಞ್ಞಣ್ಣ ರೈ 100ರ ಸಂಭ್ರಮ’ ಸಮಾರಂಭದಲ್ಲಿ ಮಾತನಾಡಿದರು.

‘ಕೆಲವರ ಹುನ್ನಾರದಿಂದ ಕಾಸರ­ಗೋಡು ಕರ್ನಾಟಕದ ಕೈತಪ್ಪಿತು. ಅದನ್ನು ವಾಪಾಸ್ಸು ಕರೆತರುವ ಕೆಲಸ­ವನ್ನು ಮುಖ್ಯಮಂತ್ರಿ ಅವರು ಮಾಡ­ಬೇಕಿದೆ. ಆಗ ಮಾತ್ರ  ಮಹಾನ್ ಕವಿ ಕಿಞ್ಞಣ್ಣ ರೈ ಅವರಿಗೆ ನಿಜ ಅರ್ಥದಲ್ಲಿ ಗೌರವ ಸಲ್ಲಿಸಿದಂತಾಗು-­ತ್ತದೆ’ ಎಂದು ಅಭಿಪ್ರಾಯಪಟ್ಟರು. ‘ತುಳು ಮಾತೃ ಭಾಷೆಯಾಗಿದ್ದರೂ, ಕನ್ನಡದ ಬಗ್ಗೆ ಅಪಾರ ಒಲವಿಟ್ಟು­ಕೊಂಡು, ಕಥನ ಕಾವ್ಯ, ಶಿಶು ಗೀತೆ­ಗಳನ್ನು ರಚಿಸಿದ್ದಾರೆ’ ಎಂದು ಶ್ಲಾಘಿಸಿದರು.

ವಿಮರ್ಶಕ ಡಾ.ಬಸವರಾಜ ಕಲ್ಗುಡಿ, ‘ತುಳು, ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಅಗಾಧ ಪಾಂಡಿತ್ಯ ಗಳಿಸಿ­ದ್ದರೂ,  ಮಕ್ಕಳ ಭಾವಕೋಶ­ವನ್ನು ತೀಡುವಂತಹ ಸರಳ ಶಿಶುಗೀತೆ­ಗಳನ್ನು ರಚಿಸಿದ್ದಾರೆ’ ಎಂದು ಹೇಳಿದರು.‘ಕುವೆಂಪು, ಬೇಂದ್ರೆ ಅವರಿಗಿಂತ ವಿಭಿನ್ನ ಪರಿಕಲ್ಪನೆಯಿಟ್ಟುಕೊಂಡು ಕಾವ್ಯ ಕ್ಷೇತ್ರದಲ್ಲಿ ತೊಡಗಿಕೊಂಡರು.

ಕನ್ನಡಕ್ಕೂ ಅನ್ವಯಿಸುವಂತಹ ತುಳು­ವಿನ ಘನಾತ್ಮಕ ಕಲ್ಪನೆಯನ್ನು  ಕೊಡುಗೆ­ಯಾಗಿ ನೀಡಿದ್ದಾರೆ’ ಎಂದರು. ಮಂಗಳೂರು ಆಕಾಶವಾಣಿ ನಿರ್ದೇಶಕ ಡಾ.ವಸಂತಕುಮಾರ ಪೆರ್ಲ, ‘ಬಹು ಸಂಸ್ಕೃತಿಗೆ ಹೆಸರಾದ ದಕ್ಷಿಣ ಕನ್ನಡದಲ್ಲಿ ಸಮನ್ವಯತೆ ಸಾಧಿಸಿದ ಅದ್ಬುತ ಕವಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT