ಬೆಂಗಳೂರು: `ಕುಲಪತಿ ಎನ್.ಪ್ರಭುದೇವ್ ಕಿರುಕುಳ ನೀಡುತ್ತಿರುವುದರಿಂದ ನನ್ನ ತಂದೆಗೆ ಗುರುವಾರ ಹೃದಯಾಘಾತವಾಗಿದೆ~ ಎಂದು ವಿವಿಯ ಮುಖ್ಯ ಎಂಜಿನಿಯರ್ ಎನ್.ಪುಟ್ಟಸ್ವಾಮಿ ಅವರ ಮಗ ಪಿ.ಮಾಕೇಶ್ ಜ್ಞಾನಭಾರತಿ ಠಾಣೆಯಲ್ಲಿ ದೂರು ನೀಡಿದ್ದಾರೆ.
`ನನ್ನ ತಂದೆ ಪರಿಶಿಷ್ಟ ಜಾತಿಯವರು ಎಂದು ಅವರ ಮೇಲೆ ವಿನಾ ಕಾರಣ ಆರೋಪ ಮಾಡಿ ಅವರ ಅಧಿಕಾರ ಕಿತ್ತುಕೊಂಡು ನನ್ನ ತಂದೆಗೆ ಮಾನಸಿಕವಾಗಿ ಆಘಾತ ಉಂಟು ಮಾಡಿದ್ದಾರೆ. ಅವರ ಪ್ರಾಣ ಹಾನಿಯಾದರೆ ಕುಲಪತಿ ಅವರೇ ಕಾರಣ~ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.