ADVERTISEMENT

`ಕುವೆಂಪುರಿಂದ ಕನ್ನಡ ವಿಶ್ವಮಾನ್ಯತೆ'

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 19:39 IST
Last Updated 10 ಡಿಸೆಂಬರ್ 2012, 19:39 IST
ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯು ಸಹ್ಯಾದ್ರಿ ಸಂಘದ ಸಹಯೋಗದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ವಿಶ್ವಕವಿ ಕುವೆಂಪು ಒಂದು ನೆನಪು ಮತ್ತು ಕುವೆಂಪು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಡಾ.ಆರ್.ಕೆ.ನಲ್ಲೂರು ಪ್ರಸಾದ್, ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ರವೀಂದ್ರನಾಥ ಟ್ಯಾಗೋರ್, ವಿವೇಕಾನಂದ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಕೆ.ಬಿ.ಕೆಂಪೇಗೌಡ, ಸಮಾಜ ಸೇವಕ ಉದಯ ಜಿ.ಶೆಟ್ಟಿ ಅವರುಗಳನ್ನು ಸನ್ಮಾನಿಸಲಾಯಿತು

ಬೆಂಗಳೂರು: `ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಏರಿಸಿದ ಕೀರ್ತಿಯು ಕುವೆಂಪು ಅವರಿಗೆ ಸಲ್ಲಬೇಕು' ಎಂದು  ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹೇಳಿದರು.ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯು ಸಹ್ಯಾದ್ರಿ ಸಂಘದ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವಕವಿ ಕುವೆಂಪು - ಒಂದು ನೆನಪು ಮತ್ತು ಕುವೆಂಪು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

`ನಾಡಿನ ಸಂಸ್ಕೃತಿಕ ಪರಂಪರೆಯನ್ನು ಕುವೆಂಪು ಅವರು ಕಾದಂಬರಿಯ ಮೂಲಕ ಮಾಡಿ ಕನ್ನಡ ಪ್ರಜ್ಞೆಯನ್ನು ಉತ್ತುಂಗ ಶಿಖರವನ್ನಾಗಿ ಮಾಡಿದ್ದಾರೆ' ಎಂದರು.`ಕುವೆಂಪು ಅವರು ಕಾದಂಬರಿಗಳನ್ನು ಕೆಲವು ವಿಮರ್ಶಕರು ಪ್ರಾದೇಶಿಕ ಕಾದಂಬರಿಗಳು ಎಂದು ಹೇಳಿದ್ದಾರೆ, ಆದರೇ, ಅವುಗಳಲ್ಲಿ ಸ್ಥಳೀಯ ವಸ್ತುಗಳಲ್ಲಿರುವ ಆತ್ಮಗಳಿವೆ ಎಂದು ಹೇಳಬಹುದಾಗಿದ್ದು, ರಾಮಾಯಣ ದರ್ಶನದ ಮೂಲಕ ಇಂಗ್ಲಿಷ್ ಕವಿಗಳ ಸ್ಮರಿಸಿದ್ದು ವಿಶ್ವಕವಿ ಎನ್ನುವುದು ತಿಳಿಯುತ್ತದೆ' ಎಂದು ಹೇಳಿದರು.

`ಕುವೆಂಪು ಜನ್ಮದಿನಾಚರಣೆಯ್ನನು ಇದೇ ತಿಂಗಳಿನ 29 ರಂದು ಸರ್ಕಾರ ಅಧಿಕೃತವಾಗಿ ಆಚರಿಸಬೇಕು ಆದರೆ ಸಾರ್ವತ್ರಿಕ ರಜೆಯನ್ನು ನೀಡುವ ಅಗತ್ಯತೆ ಇಲ್ಲ' ಎಂದು ಹೇಳಿದರು.ವಿಶ್ರಾಂತ ಕುಲಪತಿ ಡಾ.ದೇಜಗೌ ಮಾತನಾಡಿ, `ವಿಶ್ವದಲ್ಲಿ ಅತಿ ಹೆಚ್ಚು ಮಹಾಕವಿಗಳು ಇರುವುದು ಈ ನಾಡಿನಲ್ಲಿ. ಅವರಲ್ಲಿ ಕುವೆಂಪು ಅವರನ್ನು ವಿಶಿಷ್ಟವಾಗಿ ಗುರುತಿಸಹುದಾಗಿದೆ' ಎಂದರು.

ಸಾಹಿತಿ ಡಾ.ಆರ್.ಕೆ.ನಲ್ಲೂರು ಪ್ರಸಾದ್, ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ರವೀಂದ್ರನಾಥ ಟ್ಯಾಗೋರ್, ವಿವೇಕಾನಂದ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಕೆ.ಬಿ.ಕೆಂಪೇಗೌಡ, ಸಮಾಜ ಸೇವಕ ಉದಯ ಜಿ.ಶೆಟ್ಟಿ ಅವರುಗಳನ್ನು ಸನ್ಮಾನಿಸಲಾಯಿತು.

ಯುವ ಸಾಹಿತಿ ಟಿ.ಸತೀಶ್ ಜವರೇಗೌಡ, ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ರಾಜ್ಯಾಧ್ಯಕ್ಷ ಟಿ.ಸುರೇಶ್, ವೇದಿಕೆಯ ಗೌರವ ಸಲಹೆಗಾರ ಎಚ್.ವೀರಭದ್ರೇಗೌಡ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.