ADVERTISEMENT

ಕುಸಿದ ಬ್ರಿಟಿಷ್‌ ಕಾಲದ ಸೇತುವೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 19:43 IST
Last Updated 5 ಅಕ್ಟೋಬರ್ 2017, 19:43 IST
ಕುಸಿದ ಬ್ರಿಟಿಷ್‌ ಕಾಲದ ಸೇತುವೆ
ಕುಸಿದ ಬ್ರಿಟಿಷ್‌ ಕಾಲದ ಸೇತುವೆ   

ನೆಲಮಂಗಲ: ಪಟ್ಟಣದ ಅಡೇಪೇಟೆಯಲ್ಲಿ ನೆಲಮಂಗಲ ಕೆರೆಗೆ ಸಂಪರ್ಕ ಕಲ್ಪಿಸಿರುವ ರಾಜಕಾಲುವೆಗೆ ನಿರ್ಮಿಸಿದ್ದ 127 ವರ್ಷದ ಹಿಂದಿನ ಸೇತುವೆ ಭಾರಿ ಮಳೆ ಸುರಿದ ಕಾರಣ ಕುಸಿದಿದೆ.

ಬ್ರಿಟಿಷ್‌ ಕೌನ್ಸಿಲ್‌ನ ಅಧಿಕಾರಿ 1890ರಲ್ಲಿ ಈ ಸೇತುವೆಯನ್ನು ನಿರ್ಮಿಸಿದ್ದರು. ರಾಜಕಾಲುವೆಯಿಂದ 10 ಅಡಿ ಎತ್ತರವಿರುವ ಈ ಸೇತುವೆಯ ಬಲ ಮತ್ತು ಎಡಭಾಗದಲ್ಲಿ ಕಲ್ಲಿನ ಗೋಡೆಗಳಿವೆ.

‘ಪಟ್ಟಣದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸೇತುವೆ ಮೇಲೂ ರಾಜಕಾಲುವೆ ನೀರು ಹರಿಯುತ್ತಿತ್ತು. ಇದರಿಂದ ಸೇತುವೆ ಬಿರುಕು ಬಿಟ್ಟಿತ್ತು. ಗುರುವಾರ ಸುರಿದ ಮಳೆಯಿಂದ ಒಂದು ಭಾಗದಲ್ಲಿ ಬೃಹತ್‌ ಗುಂಡಿ ನಿರ್ಮಾಣವಾಗಿದೆ’ ಎಂದು ಸ್ಥಳೀಯರು ತಿಳಿಸಿದರು.

ADVERTISEMENT

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪುರಸಭೆ ಅಧಿಕಾರಿಗಳು ಮತ್ತು ಸದಸ್ಯ ಗಂಗಾಧರ ರಾವ್‌, ‘ರಸ್ತೆ ವಿಸ್ತರಣೆ ಮಾಡಿ ಮೇಲು ಸೇತುವೆ ನಿರ್ಮಿಸಲು ₹30 ಲಕ್ಷ ಮಂಜೂರಾಗಿದೆ. ಶೀಘ್ರವಾಗಿ ಟೆಂಡರ್‌ ಕರೆದು ಕಾಮಗಾರಿ ನಡೆಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.