ADVERTISEMENT

ಕೃಷಿ ಇಲಾಖೆ ಶತಮಾನೋತ್ಸವ ಕಟ್ಟಡಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:10 IST
Last Updated 20 ಏಪ್ರಿಲ್ 2012, 19:10 IST

ಬೆಂಗಳೂರು: ಕೃಷಿ ಇಲಾಖೆಯ ಶತಮಾನೋತ್ಸವ ಕಟ್ಟಡಕ್ಕೆ ಕೃಷಿ ಹಾಗೂ ಆಹಾರ ಸಂಸ್ಕರಣೆ ಸಚಿವ ಉಮೇಶ್ ವಿ. ಕತ್ತಿ ಇಲಾಖೆಯ ಕೇಂದ್ರ ಕಚೇರಿ ಆವರಣದಲ್ಲಿ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಅವರು ಮಾತನಾಡಿ, `ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರ ರೂ 5 ಕೋಟಿ ಅನುದಾನ ನೀಡಿದೆ.

ವರ್ಷಾಂತ್ಯದೊಳಗೆ ಕಟ್ಟಡದ ಉದ್ಘಾಟನೆ ನಡೆಸಲು ಉದ್ದೇಶಿಸಲಾಗಿದೆ. ಶತಮಾನೋತ್ಸವ ಭವನದಲ್ಲಿ 550 ಆಸನಗಳುಳ್ಳ ಸುಸಜ್ಜಿತ ಸಭಾಂಗಣ ನಿರ್ಮಿಸಲಾಗುವುದು. ಕೃಷಿ ವಸ್ತು ಸಂಗ್ರಹಾಲಯ ಹಾಗೂ ಇಲಾಖಾ ಕಚೇರಿಗಳಿಗೆ ಸ್ಥಳ ಮೀಸಲಿಡಲಾಗುವುದು~ ಎಂದರು.

ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಬಾಬುರಾವ್ ಮುಡಬಿ, ಕೃಷಿ ನಿರ್ದೇಶಕ ಹಾಗೂ ಆಯುಕ್ತ (ಪ್ರಭಾರ) ಡಾ.ಕೆ.ವಿ. ಸರ್ವೇಶ್ ಉಪಸ್ಥಿತರಿದ್ದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.