ADVERTISEMENT

ಕೆಂಗಲ್ ಹನುಮಂತಯ್ಯ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಪೀಣ್ಯ ದಾಸರಹಳ್ಳಿ: ಕೆಂಗಲ್ ಹನುಮಂತಯ್ಯ ಸಂಸ್ಥೆ ವತಿಯಿಂದ ಬಾಗಲಗುಂಟೆಯ ಸಾಯಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೆ `ಕೆಂಗಲ್ ಹನುಮಂತಯ್ಯ~ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಗೀತ ನಿರ್ದೇಶಕ ಗುರುಕಿರಣ್, ನಟ ವಿಜಯ ರಾಘವೇಂದ್ರ, ಸಮಾಜ ಸೇವಕ ಮಂಜುನಾಥ್, ಕೈಗಾರಿಕೋದ್ಯಮಿ ಬಿಪಿನ್, ಕ್ರೀಡಾಪಟು ಪಿ.ಜೆ.ಪುರಂಧರ್, ಭರತನಾಟ್ಯ ಕಲಾವಿದೆ ಆರಾಧನಾ, ಬಿಎಂಟಿಸಿ ಚಾಲಕಿ ಪ್ರೇಮಾ, ಪೀಣ್ಯ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಕೆ.ಬಿ.ಅರಸಪ್ಪ, ವಿವೇಕಾನಂದ ಆದರ್ಶ ಸಾಧನಾ ಕೇಂದ್ರದ ಅಧ್ಯಕ್ಷ ಕೆ.ಉಮಾ ಮಹೇಶ್ವರ್, ಕರಾವಳಿ ಸಂಘದ ಅಧ್ಯಕ್ಷ ರವೀಂದ್ರ ಕೋಟ್ಯಾನ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಚ್.ಲಕ್ಷ್ಮಣ್, ಕ್ರೀಡಾಪಟು ಡಿ.ಗಣೇಶ್, ಅಬಕಾರಿ ಸೂಪರಿಂಟೆಂಡೆಂಟ್ ಕೆ.ಕೆ.ಸುಮತಿ, ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು ಮನೋಜ್ ಕುಮಾರ್, ವಾಲಿಬಾಲ್ ಆಟಗಾರ್ತಿ ರಮ್ಯಾ ಅವರಿಗೆ ಪ್ರಶಸ್ತಿ ನೀಡಲಾಯಿತು. ಇವರೊಂದಿಗೆ ಹಲವು ಸಮಾಜ ಸೇವಕರು ಮತ್ತು ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರೇಗೌಡ, ಶಾಸಕ ಎಸ್.ಮುನಿರಾಜು, ಮೇಯರ್ ಶಾರದಮ್ಮ ರಾಮಾಂಜಿನಪ್ಪ, ಪಾಲಿಕೆ ಸದಸ್ಯರಾದ ಬಿ.ಆರ್.ಚಂದ್ರಶೇಖರ್, ಎಂ.ಮುನಿಸ್ವಾಮಿ, ಎಂ.ಬಿ.ಗೋವಿಂದೇಗೌಡ, ಎಚ್.ಎನ್.ಗಂಗಾಧರ್, ತಿಮ್ಮನಂಜಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಜಯರಂಗ, ಸಂಸ್ಥೆಯ ಅಧ್ಯಕ್ಷ ಬಿ.ಬೊಮ್ಮಲಿಂಗಯ್ಯ ಇತರರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.