ADVERTISEMENT

ಕೆರೆ ಉಳಿವಿಗೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ವಿದ್ಯಾರ್ಥಿಗಳಿಂದ ಪ್ರತಿಭಟನೆ
ವಿದ್ಯಾರ್ಥಿಗಳಿಂದ ಪ್ರತಿಭಟನೆ   

ಬೆಂಗಳೂರು: ‘ಪಟ್ಟಂದೂರು ಅಗ್ರಹಾರ ಕೆರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಖಾಸಗಿಯವರ ಪಾಲಾಗುತ್ತಿದೆ’ ಎಂದು ಆರೋಪಿಸಿ ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಹಾಗು ಶಾಲಾ ಮಕ್ಕಳು ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.

ಸುಮಾರು ಎರಡು ಕಿ.ಮೀ.ಗೂ ಹೆಚ್ಚು ದೂರದಿಂದ ಪಟ್ಟಂದೂರು ಅಗ್ರಹಾರ ಗ್ರಾಮಸ್ಥರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಸೇಂಟ್ ಜೋಸೆಫ್ ಹಾಗೂ ಹೋಲಿ ಕ್ರಾಸ್ ಶಾಲೆಗಳ ವಿದ್ಯಾರ್ಥಿಗಳು ಕೆರೆ ಉಳಿಸಿ ಎಂದು ಘೋಷಣೆ ಕೂಗುತ್ತಾ ಮಾನವ ಸರಪಳಿ ರಚಿಸಿದರು.

‘ಸರ್ಕಾರಿ ಜಾಗಗಳ ಒತ್ತುವರಿಗೆ ಅಧಿಕಾರಿಗಳು ಕೈ ಜೋಡಿಸಿರುವುದು ವಿಪರ್ಯಾಸ. ಹಿಂದಿನ ಸಮೀಕ್ಷೆ ಪ್ರಕಾರ ಪಟ್ಟಂದೂರು ಅಗ್ರಹಾರ ಕೆರೆ 12 ಎಕರೆ 37 ಗುಂಟೆ ಇದೆ. ಕೆರೆಯನ್ನು ಅನೇಕರು ಒತ್ತುವರಿ ಮಾಡಿದ್ದಾರೆ. ತೆರವು ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಲ್ಲದೆ ಒತ್ತುವರಿಯಾಗದೆ ಉಳಿದ ಪ್ರದೇಶವನ್ನು ನ್ಯಾಯಾಲಯ ತಾಲ್ಲೂಕು ಪಂಚಾಯಿತಿಗೆ ಹಸ್ತಾಂತರಿಸಿದೆ. ಅವರೂ ಕೆರೆ ಪ್ರದೇಶಕ್ಕೆ ಬೇಲಿಹಾಕಿಲ್ಲ’ ಎಂದು ದೂರಿದರು.

ADVERTISEMENT

‘ಕೆರೆ ಪಕ್ಕದಲ್ಲಿಯೇ ಸಚಿವರೊಬ್ಬರ 27 ಎಕರೆ ಜಮೀನಿದ್ದು, ಕೆರೆ ಜಾಗವನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ತಹಸೀಲ್ದಾರ್‌ ಅವರು ತಕ್ಷಣ ಕೆರೆಯ ಮರುಸರ್ವೇ ನಡೆಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.