ADVERTISEMENT

ಕೆರೆ ಕೋಡಿ ಒಡೆದು ಗ್ರಾಮಕ್ಕೆ ನೀರು; ಬೆಳೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 19:55 IST
Last Updated 1 ಅಕ್ಟೋಬರ್ 2017, 19:55 IST

ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಭಕ್ತರಹಳ್ಳಿ ಕೆರೆಯ ಕೋಡಿ ಒಡೆದು ಭಾನುವಾರ ರಾತ್ರಿ ಗ್ರಾಮಗಳಿಗೆ ನೀರು ನುಗ್ಗಿದೆ.
ಇದಲ್ಲದೆ ಕೆರೆಯ ಹಿಂಭಾಗದಲ್ಲಿ ಬೆಳೆಯಲಾಗಿದ್ದ ಮುಸುಕಿನ ಜೋಳ ಹಾಗೂ ರಾಗಿ ಬೆಳೆ ಜಲಾವೃತಗೊಂಡಿದೆ.

ಭಾನುವಾರ ಸಂಜೆ ಸುರಿದ ಮಳೆಯಿಂದಾಗಿ ಒಮ್ಮಿಂದೊಮ್ಮೆಗೆ ಹೆಚ್ಚು ನೀರು ಕೆರೆಗೆ ಬಂದಿದ್ದರಿಂದ ಕೋಡಿ ಒಡೆದಿದೆ.

ಅಪರೂಪಕ್ಕೆ ಒಮ್ಮೆ ತುಂಬಿದ್ದ ಕೆರೆ ಕೋಡಿ ಒಡೆದಿದ್ದರಿಂದ ಅಪಾರ ಪ್ರಮಾಣದಲ್ಲಿ ನೀರು ವ್ಯರ್ಥವಾಗಿ ಹರಿದುಹೋಗಿದೆ.
ಇದರಿಂದಾಗಿ ಮಳೆ ಬಂದೂ ಸಹ ರೈತರಿಗೆ ಉಪಯೋಗ ಇಲ್ಲದಂತಾಗಿದೆ ಎನ್ನುತ್ತಾರೆ ಗ್ರಾಮದ ರೈತರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.