ADVERTISEMENT

ಕೆಲವು ಕಿಯೋಸ್ಕ್ ಬಸ್ ನಿಲ್ದಾಣ ತೆರವು

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST
ಕಿಯೋಸ್ಕ್ ಬಸ್ ಸ್ಟಾಪ್
ಕಿಯೋಸ್ಕ್ ಬಸ್ ಸ್ಟಾಪ್   

ಬೆಂಗಳೂರು: ನಗರದ ವಿವಿಧೆಡೆ ಕಿಯೊಸ್ಕ್ ಮಾದರಿಯಲ್ಲಿ ನಿರ್ಮಿಸಿದ ಬಸ್ ನಿಲ್ದಾಣಗಳಲ್ಲಿ ಮೂತ್ರ ವಿಸರ್ಜನೆಯಂತಹ ಅನೈರ್ಮಲ್ಯದ ಚಟುವಟಿಕೆಗಳು ಹೆಚ್ಚುತ್ತಿವೆ. ಇದರಿಂದಾಗಿ ಬಿಬಿಎಂಪಿ ಹಾಗೂ ಜಾಹೀರಾತು ಏಜೆನ್ಸಿಗಳು ಕೆಲವು ಕಿಯೋಸ್ಕ್‌ಗಳನ್ನು ತೆರವುಗೊಳಿಸಲು ಮುಂದಾಗಿವೆ.

`ಕಿಯೋಸ್ಕ್ ಒಳಗೆ ಮೂತ್ರ ವಿಸರ್ಜನೆ ಸೇರಿದಂತೆ ನಾನಾ ಬಗೆಯ ಚಟುವಟಿಕೆಗಳು ಹೆಚ್ಚುತ್ತಿವೆ. ಇದರಿಂದಾಗಿ ಬಸ್ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಇದಲ್ಲದೆ ಬಸ್ ನಿಲ್ದಾಣದ ಜಾಹೀರಾತು ಮೌಲ್ಯವೂ ಕಡಿಮೆಯಾಗುತ್ತಿದೆ.

ಹೀಗಾಗಿ ಕಿಯೋಸ್ಕ್‌ಗಳನ್ನು ತೆರವುಗೊಳಿಸಲು ಯೋಜಿಸಲಾಗುತ್ತಿದೆ' ಎಂದು ಬಸ್ ನಿಲ್ದಾಣಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ವಾಂಟೇಜ್ ಜಾಹೀರಾತು ಸಂಸ್ಥೆಯ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.