ADVERTISEMENT

ಕೈಗಾರಿಕಾ ಉತ್ಪಾದನೆ ಕುಸಿತ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 11:40 IST
Last Updated 14 ಜನವರಿ 2011, 11:40 IST

ನವದೆಹಲಿ (ಪಿಟಿಐ): ಕೈಗಾರಿಕಾ ವೃದ್ಧಿ ದರವು ನವೆಂಬರ್ ತಿಂಗಳಲ್ಲಿ ಶೇಕಡ 2.7ರಷ್ಟು ಕುಸಿಯುವ ಮೂಲಕ ಕಳೆದ ಹದಿನೆಂಟು ತಿಂಗಳಲ್ಲೇ ಕನಿಷ್ಠ ಇಳಿಕೆ ದಾಖಲಿಸಿದೆ.
ಈ ವಿದ್ಯಮಾನವ 2011-12ನೇ ಸಾಲಿನ ಕೇಂದ್ರ ಬಜೆಟ್ ಮೇಲೆ  ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಉದ್ಯಮ ಮೂಲಗಳು ಪ್ರತಿಕ್ರಿಯಿಸಿವೆ. 
ದೇಶದ ಒಟ್ಟಾರೆ ಕೈಗಾರಿಕಾ ಸೂಚ್ಯಂಕಕ್ಕೆ (ಐಐಪಿ) ಶೇ 80ರಷ್ಟು  ಕೊಡುಗೆ ನೀಡುವ ತಯಾರಿಕಾ ಕ್ಷೇತ್ರ ನವೆಂಬರ್ ತಿಂಗಳಲ್ಲಿ ಶೇ 2.3ರಷ್ಟು ಮಾತ್ರ ಪ್ರಗತಿ ಕಂಡಿರುವುದು ವೃದ್ಧಿ ದರ ಕುಸಿಯಲು ಮುಖ್ಯ ಕಾರಣವಾಗಿದೆ. ಜನವರಿ 25 ರಂದು ‘ಆರ್‌ಬಿಐ’ ತ್ರೈಮಾಸಿಕ ವಿತ್ತೀಯ ನೀತಿಯ ಪರಾಮರ್ಶೆ ಪ್ರಕಟಿಸಲಿದ್ದು, ಇದು ಕೂಡ ಒಟ್ಟಾರೆ ಕೈಗಾರಿಕಾ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಮುಂದಿನ ನಾಲ್ಕು ತಿಂಗಳಲ್ಲಿ ಕೈಗಾರಿಕಾ ವೃದ್ಧಿ ದರ ಮತ್ತೆ ಮೇಲ್ಮುಖ ಚಲನೆಗೆ ಮರಳಲಿದೆ. ಇದಕ್ಕೆ ಸಂಬಂಧಿಸಿದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವದು’ ಎಂದು  ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.
 ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 10.7ರಷ್ಟಿದ್ದ ಗಣಿಗಾರಿಕೆ ಉತ್ಪಾದನೆ  ನವೆಂಬರ್ ತಿಂಗಳಲ್ಲಿ ಶೇ 6ಕ್ಕೆ ಇಳಿದಿದೆ. ವಿದ್ಯುತ್ ಉತ್ಪಾದನೆಯಲ್ಲಿ               ಶೇ 1.8ರಷ್ಟು ಪ್ರಗತಿ ಕಂಡುಬಂದಿದ್ದು,     ಶೇ 4.6ಕ್ಕೆ ಏರಿದೆ. ಅಲ್ಪಾವಧಿಯ ಗ್ರಾಹಕ ಉತ್ಪನ್ನಗಳು ಶೇ 4.3ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 7.4ರಷ್ಟಿದ್ದ ಕೈಗಾರಿಕಾ ವೃದ್ಧಿ ದರ ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ                  ಶೇ 9.5ರಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.