ADVERTISEMENT

ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:35 IST
Last Updated 14 ಸೆಪ್ಟೆಂಬರ್ 2011, 19:35 IST

ಕೆಂಗೇರಿ:  ಕೇಂದ್ರ ಜವಳಿ ಸಚಿವಾಲಯದ ಸಹಯೋಗದಲ್ಲಿ ಕರಕುಶಲ ಮತ್ತು ಕೈಮಗ್ಗ ಸಂಸ್ಥೆಯು ಕೆಂಗೇರಿ ಉಪನಗರದ ಮೈದಾನದಲ್ಲಿ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದೆ.

ದೇಶದ ವಿವಿಧ ಕಡೆಗಳಿಂದ ಆಗಮಿಸಿರುವ ಕುಶಲಕರ್ಮಿಗಳು ಸಿದ್ಧಪಡಿಸಿದ ಕರಕುಶಲ ವಸ್ತುಗಳು ಮಾರಾಟಕ್ಕಿವೆ. ಇದೇ 26ರವರೆಗೆ ಮೇಳ ನಡೆಯಲಿದ್ದು, ಸ್ಥಳೀಯರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಕೈಮಗ್ಗ ವಸ್ತುಗಳು, ಗುಡಿ ಕೈಗಾರಿಕಾ ಉತ್ಪನ್ನಗಳು, ಬಣ್ಣ ಬಣ್ಣದ ಕರಕುಶಲ ಆಟಿಕೆಗಳು, ಗೃಹೋಪಯೋಗಿ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು, ಹೊದಿಕೆಗಳು, ಉಡುಪುಗಳು, ಕಸೂತಿ ಉತ್ಪನ್ನಗಳು ಮೇಳದಲ್ಲಿವೆ.
ಸಚಿವೆ ಶೋಭಾ ಕರಂದ್ಲಾಜೆ ಅವರು ಮೇಳವನ್ನು ಇತ್ತೀಚೆಗೆ ಉದ್ಘಾಟಿಸಿದರು. ಪಾಲಿಕೆ ಸದಸ್ಯ ರಾ.ಆಂಜನಪ್ಪ ಇತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.