ಬೆಂಗಳೂರು: ಇದೇ 12ರಿಂದ ಬೆಂಗಳೂರು - ಕೊಯಮತ್ತೂರು ನಡುವೆ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತೊಂದು ವೋಲ್ವೊ (ಐರಾವತ) ಬಸ್ ಸಂಚಾರ ಆರಂಭಿಸಲಿದೆ.
ಬೆಂಗಳೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ಬಸ್ ಹೊಸೂರು, ಸೇಲಂ, ಅವಿನಾಶಿ ಮಾರ್ಗವಾಗಿ ಸಾಗಿ ಸಂಜೆ 7.30ಕ್ಕೆ ಕೊಯಮತ್ತೂರು ತಲುಪಲಿದೆ. ಕೊಯಮತ್ತೂರಿನಿಂದ ಬೆಳಿಗ್ಗೆ 9 ಗಂಟೆಗೆ ಹೊರಡುವ ಬಸ್ ಸಂಜೆ 4.30ಕ್ಕೆ ಬೆಂಗಳೂರು ತಲುಪಲಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ. ಈ ಬಸ್ಗೆ 30 ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗೆ 7760990562, 7760990561, 080 - 2287 0099 ದೂರವಾಣಿಗಳಿಗೆ ಕರೆ ಮಾಡಬಹುದು. ನಿಗಮದ ಆರು ವೋಲ್ವೊ ಬಸ್ಗಳು ಬೆಂಗಳೂರು - ಕೊಯಮತ್ತೂರು ನಡುವೆ ಈಗಾಗಲೇ ಸಂಚರಿಸುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.