ADVERTISEMENT

ಕೋಟಿ ಗಿಡ ನೆಡುವ ಅಭಿಯಾನ ಜೂನ್‌ 5ರಿಂದ

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಮರ್ಥ ಭಾರತ ಸಂಸ್ಥೆಯು 1 ಕೋಟಿ ಗಿಡ ನೆಡುವ ಅಭಿಯಾನವನ್ನು ಜೂನ್‌ 5ರಿಂದ ಆಗಸ್ಟ್‌ 15ರವರೆಗೆ ರಾಜ್ಯದಾದ್ಯಂತ ನಡೆಸಲಿದೆ.

ಈ ಅಭಿಯಾನದಲ್ಲಿ 600ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಕೈಜೋಡಿಸಲಿವೆ. ಅರಣ್ಯ ಮತ್ತು ತೋಟಗಾರಿಕಾ ಇಲಾಖೆ ಗಿಡ ಒದಗಿಸುವ ಭರವಸೆ ನೀಡಿವೆ. ಹಲವಾರು ಸಂಘ ಸಂಸ್ಥೆಗಳು 30 ಲಕ್ಷಕ್ಕೂ ಅಧಿಕ ಬೀಜದ ಉಂಡೆಗಳನ್ನು ಒದಗಿಸುವುದಾಗಿ ಹೇಳಿವೆ. ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವ, ಸಂರಕ್ಷಣೆಗೆ ಸಾಧ್ಯವಾಗುವ ಪ್ರದೇಶಗಳಲ್ಲಿ ಮಾತ್ರ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ಅಭಿಯಾನದ ಮಾರ್ಗದರ್ಶಕ ಗಣಪತಿ ಹೆಗಡೆ ಇತ್ತೀಚೆಗೆ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗಿಡ ನೆಡುವುದು, ಸರಿಯಾದ ಜಾಗದಲ್ಲಿ ಬೀಜದ ಉಂಡೆಗಳನ್ನು ಎಸೆಯುವುದು ಅಥವಾ ಹೂಳುವುದು, ಆಯಾ ಗಿಡಗಳ ಬೀಜಗಳನ್ನು ನೇರವಾಗಿ ಬಿತ್ತುವ ಮೂಲಕ ಅಭಿಯಾನ ನಡೆಯಲಿದೆ ಎಂದು ಅವರು ತಿಳಿಸಿದರು.

ADVERTISEMENT

ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಪ್ರದೀಪ್‌ ಭಾರದ್ವಾಜ್‌, ಪರಿಸರ ಕಾರ್ಯಕರ್ತ ಲಿಂಗರಾಜ ನಿಡುವಣಿ, ಟ್ರಸ್ಟಿ ಅಪರ್ಣಾ ಪಟವರ್ಧನ್‌ ಇದ್ದರು. ಮಾಹಿತಿಗೆ ಮೊ. 8992662262, 97381 32356 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.