ADVERTISEMENT

‘ಕೌಶಲ ಎಂಜಿನಿಯರ್‌ಗಳ ಅಗತ್ಯವಿದೆ’

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 19:30 IST
Last Updated 10 ಏಪ್ರಿಲ್ 2018, 19:30 IST

ಬೆಂಗಳೂರು: ‘ಕೌಶಲಯುಕ್ತ ಸಿವಿಲ್‌ ಎಂಜಿನಿಯರ್‌ಗಳ ಅಗತ್ಯ ನಮ್ಮ ದೇಶಕ್ಕೆ ಹೆಚ್ಚಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಐ.ಎಸ್‌.ಶಿವಕುಮಾರ್‌ ಹೇಳಿದರು.

ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರ್‌ ವಿಭಾಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಸಾಗರ್ ಟೆಕ್’ ಉತ್ಸವದಲ್ಲಿ ಮಾತನಾಡಿದರು.

ನಾಯಕತ್ವ, ಗುಂಪಿನಲ್ಲಿ ಕಾರ್ಯನಿರ್ವಹಿಸುವ ಬಗೆ.. ಹೀಗೆ ಈ ಹೊತ್ತಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಪಠ್ಯ ಕಲಿಯುವುದರಿಂದ ದೊರೆ
ಯುವುದಿಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಕೆಲಸಕ್ಕೆ ಅಗತ್ಯವಾದ ಕೌಶಲ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಕಾಲೇಜಿನ ಸಿವಿಲ್ ಎಂಜಿನಿಯರ್‌ ವಿಭಾಗ ಹೊರತಂದಿರುವ ‘ದಿ ಗೇಟ್‌ವೇ’ ಸ್ಮರಣಸಂಚಿಕೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಪಿ.ಎಸ್. ಪ್ರಕಾಶ್ ಗಾಳಿಸ್ವಾಮಿ ಬಿಡುಗಡೆ ಮಾಡಿದರು. ‘ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಉತ್ಸವ ಉತ್ತಮ ವೇದಿಕೆಯಾಗಿದೆ. ದೇಶದ ಪ್ರಗತಿಗೆ ವಿದ್ಯಾರ್ಥಿಗಳು ತಮ್ಮದೇ ಕೊಡುಗೆ ನೀಡಬಹುದು’ ಎಂದರು.

ಸಿವಿಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಜನರನ್ನು ರಂಜಿಸಿತು. ಮುದ್ರ ಮತ್ತು ತಂಡದವರ ನೃತ್ಯ ಪ್ರದ
ರ್ಶನ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ಹಾಡು, ಮಿಮಿಕ್ರಿ... ಹೀಗೆ ವಿದ್ಯಾರ್ಥಿಗಳು ವಿವಿಧ ಕಲೆಗಳನ್ನು ಪ್ರದರ್ಶಿಸಿ, ಪ್ರತಿಭೆ ಅನಾವರಣ ಮಾಡಿದರು.

18 ಕಾಲೇಜಿನ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು. ತಾಂತ್ರಿಕ ಪ್ರಾಜೆಕ್ಟ್ ಅನಾವರಣ ಮಾಡುವ ‘ದಕ್ಷ’, ಪ್ರಬಂಧ ಮಂಡನೆಗೆ ‘ಪ್ರಸ್ತುತಿ’, ಕ್ವಿಕ್ ಸರ್ವೆ, ಬ್ಯಾಟಲ್ ಆಫ್ ಟೆಂಡರ್ಸ್, ಫಿಫಾ, ಮಾಸ್ಟರ್ ಬಿಲ್ಡರ್ ಸೇರಿ 12 ವಿಭಾಗದಲ್ಲಿ ಸ್ಪರ್ಧೆಗಳು ನಡೆ
ದವು. ಬುಧವಾರ ಸಂಜೆ 4.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.