ADVERTISEMENT

ಕ್ಲಬ್‌ಗೆ ಜಾಗ ಪ್ರಶ್ನಿಸಿ ಪಿಐಎಲ್‌

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:40 IST
Last Updated 27 ಮಾರ್ಚ್ 2018, 19:40 IST
ಕ್ಲಬ್‌ಗೆ ಜಾಗ ಪ್ರಶ್ನಿಸಿ ಪಿಐಎಲ್‌
ಕ್ಲಬ್‌ಗೆ ಜಾಗ ಪ್ರಶ್ನಿಸಿ ಪಿಐಎಲ್‌   

ಬೆಂಗಳೂರು: ಯಲಹಂಕ ಹೋಬಳಿಯ ಕತ್ತಿ ಹೊಸಹಳ್ಳಿಯಲ್ಲಿ ಸಾರ್ವಜನಿಕರ ಬಳಕೆಗೆ ಮೀಸಲಾದ ಜಾಗದಲ್ಲಿ ಸಹಕಾರ ನಗರ ಕ್ಲಬ್‍ಗೆ 3,336 ಚದರ ಮೀಟರ್ ಜಮೀನು ಹಂಚಿಕೆ ಮಾಡಿರುವುದನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಲಾಗಿದೆ.

ಈ ಕುರಿತಂತೆ ‘ರಕ್ಷಣಾ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (‍ಪಿಐಎಲ್) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ಒಂದು ವಾರ ಕಾಲ ಮುಂದೂಡಿದೆ.

ಕೋರಿಕೆ ಏನು?: ‘ಈ ಮೊದಲು ವಿವಾದಿತ ಜಾಗವನ್ನು ನಾಗರಿಕ ಬಳಕೆಗೆ ಮೀಸಲಿಡಲಾಗಿತ್ತು. ಇದನ್ನು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು (ಬಿಡಿಎ), ಕ್ಲಬ್‍ನ ಅಧ್ಯಕ್ಷರೂ ಆದ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರ ಪ್ರಭಾವದ ಮೇರೆಗೆ ಕಳೆದ ವರ್ಷ ಡಿಸೆಂಬರ್ 28ರಂದು ಕ್ಲಬ್‌ಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ. ಇದು ಕಾನೂನು ಬಾಹಿರ. ಆದ್ದರಿಂದ ಬಿಡಿಎ ಆದೇಶ ರದ್ದುಗೊಳಿಸಬೇಕು. ಆ ಜಾಗವನ್ನು ಸಾರ್ವಜನಿಕರ ಬಳಕೆಗೆ ಮೀಸಲಿಡಲು ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.