ADVERTISEMENT

ಗುಡುಗು ಸಹಿತ ಮಳೆ: ಮಾವು ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 8 ಮೇ 2012, 19:50 IST
Last Updated 8 ಮೇ 2012, 19:50 IST

ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿ ಸೇರಿದಂತೆ ಹಲವೆಡೆ ಮಂಗಳವಾರ ಸಂಜೆ ಗುಡುಗು, ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ.

ಕೈಲಾಂಚ ಹೋಬಳಿಯೊಂದರಲ್ಲಿಯೇ 74 ಮಿ.ಮೀ (7.4 ಸೆಂ.ಮೀ) ಮಳೆಯಾದ ವರದಿಯಾಗಿದೆ. ಕವಣಾಪುರ, ಅಂಕನಹಳ್ಳಿ, ಜಕ್ಕನಹಳ್ಳಿ, ಲಕ್ಕೋಜಹಳ್ಳಿಯಲ್ಲಿ  ಮಾವಿನ ಕಾಯಿ ಉದುರಿ ಅಂದಾಜು 40 ಲಕ್ಷ ರೂಪಾಯಿ ನಷ್ಟವಾಗಿದೆ. ಗಾಳಿ ಮಳೆಯಿಂದ ರೇಷ್ಮೆ ಹುಳು ಸಾಕಣೆಯ ಮನೆ ಸೇರಿದಂತೆ ಆರು ಮನೆಗಳ ಮೇಲ್ಛಾವಣಿ ಹಾರಿ ಹೋಗಿ ಅಪಾರ ನಷ್ಟ ಉಂಟಾಗಿದೆ ಎಂದು ಕಂದಾಯ ನಿರೀಕ್ಷಕ ಮುನಿರಾಜು `ಪ್ರಜಾವಾಣಿ~ಗೆ ತಿಳಿಸಿದರು. ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ಕೆ.ರಾಜು, ತಹಶೀಲ್ದಾರ್ ರವಿ ತಿರ್ಲಾಪುರ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.