ADVERTISEMENT

ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 18:50 IST
Last Updated 3 ಆಗಸ್ಟ್ 2012, 18:50 IST

ಪೀಣ್ಯ ದಾಸರಹಳ್ಳಿ: `ಮರಗಳ ನಾಶದಿಂದ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತವೆ ಎಂಬುದನ್ನು ನಾವು ಅರಿಯಬೇಕು. ನಮ್ಮ ದಿನನಿತ್ಯದ ಕಾಯಕದ ಜೊತೆಗೆ ಪರಿಸರ ಸಂರಕ್ಷಣೆಗೆ ಕೆಲವು ಸಮಯ ಮೀಸಲಿಡುವ ಮೂಲಕ ಗಿಡ ಮರ ಸಂರಕ್ಷಣೆಗೆ ಮುಂದಾಗಬೇಕು~ ಎಂದು ಶಾಸಕ ಎಸ್.ಮುನಿರಾಜು ಕರೆ ನೀಡಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಕ್ರಿಯಾ ಸಮಿತಿ ಬಾಗಲಗುಂಟೆಯಿಂದ ಮಾರಮ್ಮ ದೇವಸ್ಥಾನದಿಂದ ಮಳೆಗಾಗಿ ಪ್ರಾರ್ಥಿಸಿ ಚಾಮುಂಡಿ ಬೆಟ್ಟಕ್ಕೆ ಹೊರಟ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

`ನಾವು ದೇವರಿಗೆ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ವೈಜ್ಞಾನಿಕವಾದ ಆಲೋಚನೆ ಇಟ್ಟುಕೊಂಡು ಇಂಗು ಗುಂಡಿಗಳನ್ನು ನಿರ್ಮಿಸಿ ಮಳೆ ನೀರು ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಇಲ್ಲದಿದ್ದರೆ ನಮ್ಮ ಸರ್ವ ನಾಶಕ್ಕೆ ನಾವೇ ಕಾರಣರಾಗುತ್ತೇವೆ~ ಎಂದು ಅವರು ತಿಳಿಸಿದರು.

ಬಿಜೆಪಿ ಮುಖಂಡರಾದ ಗಂಗರಾಜು, ಬಿ.ಟಿ.ಶ್ರೀನಿವಾಸ್, ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಕೆ.ಜಿ.ಕುಮಾರ್, ಡಿ.ಕೆ.ಸುರಕ್ಷಾ ಮಂಜುನಾಥ್, ಪ್ರಸನ್ನ, ಗೋವಿಂದರಾಜು, ದೇವರಾಜು, ವೇಣುಗೋಪಾಲ್, ಸಂತೋಷ್, ವಿಶ್ವನಾಥ್ ಪೂಜಾರಿ, ವೀರಭದ್ರ, ನಾಗರತ್ನ, ಈಶ್ವರ್ ಇತರರು ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.