ADVERTISEMENT

ಛಾಯಾಗ್ರಹಕ ಸುಂದರನಾಥ ಸುವರ್ಣ ನಿಧನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 13:26 IST
Last Updated 10 ಡಿಸೆಂಬರ್ 2013, 13:26 IST

ಬೆಂಗಳೂರು:  ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ  ಕನ್ನಡ ಚಲನಚಿತ್ರ ಖ್ಯಾತ ಛಾಯಾಗ್ರಹಕ ಸುಂದರನಾಥ ಸುವರ್ಣ(60) ಮಂಗಳವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕನ್ನಡ ಚಿತ್ರರಂಗದಲ್ಲಿ ಸುವರ್ಣ ಅವರ ಛಾಯಾಗ್ರಹಣ ಮತ್ತು ಅದರ ಕಲಾತ್ಮಕತೆ, ವೃತ್ತಿಪರತೆಗೆ ಪರ್ಯಾಯ ಇನ್ನೊಬ್ಬರಿಲ್ಲ. ಚಿತ್ರ ನಿರ್ದೇಶಕರ ಚಿಂತನೆಯನ್ನು ಕ್ಯಾಮೆರಾ ಮೂಲಕ ದೃಶ್ಯರೂಪಕ್ಕಿಳಿಸುವ ಅವರ ಕೌಶಲ್ಯ ಬೆರಗುಮೂಡಿಸುವಂತಹುದು.

ಆಕಸ್ಮಿಕವಾಗಿ ಕೈಗೆ ಸಿಕ್ಕಿದ ಕ್ಯಾಮೆರಾದ ಮೇಲೆ ಆಸಕ್ತಿ ಬೆಳೆಸಿಕೊಂಡು ಸ್ವಂತ ಪರಿಶ್ರಮದಿಂದಲೇ ಸ್ಥಿರ ಚಿತ್ರಗಳನ್ನು ತೆಗೆಯಲಾರಂಭಿಸಿದವರು ಸುವರ್ಣ. ಮುಂದೆ, `ಅಗ್ನಿಪರ್ವ~, `ಕಿಲಾಡಿ ತಾತ~, `ನೀ ನನ್ನ ದೈವ~ ಚಿತ್ರಗಳ ಮೂಲಕ ನಿರ್ದೇಶಕರಾಗಿಯೂ ತಮ್ಮ ಛಾಪು ಒತ್ತಿದರು. ಕೆಲ ಚಿತ್ರಗಳನ್ನೂ ನಿರ್ಮಿಸಿದರು. `ನಮ್ಮೂರ ಮಂದಾರ ಹೂವೆ~, `ರಾಜಕೀಯ~ ಚಿತ್ರಗಳಲ್ಲಿನ ಅವರ ಛಾಯಾಗ್ರಹಣ ಚಿತ್ರ ಅಭಿಮಾನಿಗಳಿಗೆ ಅವಿಸ್ಮರಣೀಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT