ADVERTISEMENT

ಛಾಯಾಚಿತ್ರದ ಮೂಲಕ ಮತದಾನದ ಅರಿವು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 19:46 IST
Last Updated 23 ಮಾರ್ಚ್ 2014, 19:46 IST

ಬೆಂಗಳೂರು: ಜಾಹೀರಾತು ಹಾಗೂ ಪ್ರಚಾರ ನಿರ್ದೇಶನಾಲಯವು ಬಿಬಿ­ಎಂಪಿ ಸಹಯೋಗದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಗರದ  ಮಹಾತ್ಮ ಗಾಂಧಿ ರಸ್ತೆ­ಯ­ಲ್ಲಿರುವ ರಂಗೋಲಿ ಮೆಟ್ರೊ ಕಲಾ ಕೇಂದ್ರದ ಛಾಯಾ ಗ್ಯಾಲರಿಯಲ್ಲಿ  ಛಾಯಾ­ಚಿತ್ರ ಪ್ರದರ್ಶನವನ್ನು ಏರ್ಪಡಿಸಿದೆ.

ಬಿಬಿಎಂಪಿ ವಿಶೇಷ ಆಯುಕ್ತ  (ಚುನಾವಣೆ) ಕೆ.ಆರ್.ನಿರಂಜನ್‌ ಅವರು ಭಾನುವಾರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ,  ‘ಪ್ರದ­ರ್ಶ­ನ­ದಲ್ಲಿ­ರುವ ಛಾಯಾ­ಚಿತ್ರಗಳು ಯುವಕರನ್ನು ಆಕ­ರ್ಷಿಸುವ ರೀತಿಯ­ಲ್ಲಿವೆ. ಇದ­ರಿಂ­ದಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವ­ಹಿಸಲಿದ್ದಾರೆ ಎಂದು ಹೇಳಿದರು.

ಜಾಹೀರಾತು ಹಾಗೂ ಪ್ರಚಾರ ನಿರ್ದೇಶನಾಲಯದ ಕ್ಷೇತ್ರ ಪ್ರಚಾರ ಅಧಿಕಾರಿ ಪಿ.ಜಿ.ಪಾಟೀಲ್‌ ಮಾತ ನಾಡಿ, ಪ್ರದರ್ಶನದ ಮೊದಲ ದಿನವೇ  ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು.
ಮಾರ್ಚ್‌ 26ರವರೆಗೆ ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.