ADVERTISEMENT

ಜೆಟ್ಟಿಂಗ್‌ ಯಂತ್ರಗಳ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 20:09 IST
Last Updated 19 ಸೆಪ್ಟೆಂಬರ್ 2013, 20:09 IST

ಬೆಂಗಳೂರು: ಜಲಮಂಡಳಿಯ 12 ಜೆಟ್ಟಿಂಗ್‌ ಮತ್ತು 2 ಸಕ್ಕಿಂಗ್‌ ಯಂತ್ರಗಳು ಇದೇ ಶನಿವಾರ (ಸೆ. 21) ಪೂರ್ವ–3ರ ಉಪ ವಿಭಾಗದ ಕೆ.ಆರ್‌.ಪುರ, ನಾರಾಯಣಪುರ, ರಾಮಮೂರ್ತಿನಗರ, ವಿಭೂತಿಪುರ ಮತ್ತು ವಾಯುವ್ಯ –1ರ ಉಪ ವಿಭಾಗದ ಕೇತಮಾರನಹಳ್ಳಿ, ಮಹಾಲಕ್ಷ್ಮಿ ಲೇಔಟ್‌, ರಾಜಾಜಿನಗರ 1ಮತ್ತು 2, ನಂದಿನಿ ಲೇಔಟ್‌ ಪ್ರದೇಶಗಳ ವ್ಯಾಪ್ತಿಯ ಒಳಚರಂಡಿ ಮಾರ್ಗಗಳ ನಿರ್ವಹಣೆ ಕಾರ್ಯಾಚರಣೆ ನಡೆಸಲಿವೆ.

ಈ ಪ್ರದೇಶಗಳ ಒಳಚರಂಡಿ ಮಾರ್ಗಗಳಲ್ಲಿ ಅಡಚಣೆಗಳಿದ್ದಲ್ಲಿ ಜೆಟ್ಟಿಂಗ್‌ ಯಂತ್ರಗಳ ಸೇವೆಗೆ ಪೂರ್ವ–3ರ ಉಪ ವಿಭಾಗದ ಸಹಾಯಕ ಕಾರ್ಯ­ನಿರ್ವಾಹಕ ಎಂಜಿನಿಯರ್‌ ಕಾಂತ (97409 84162) ಅವರನ್ನು ಸಂಪರ್ಕಿಸಬಹುದು ಎಂದು ಜಲಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.