
ಪ್ರಜಾವಾಣಿ ವಾರ್ತೆಬೆಂಗಳೂರು: ಜ್ಞಾನೋದಯ ದಿಗಂಬರ ಜೈನ್ ಟ್ರಸ್ಟ್ ಹಾಗೂ ಡಾ.ರಾಜ್‌ಕುಮಾರ್ ಬ್ಲಡ್ ಬ್ಯಾಂಕ್ ಸಂಸ್ಥೆಯು ವಿಮಾನಪುರದ ಮಹಾವೀರ ದಿಗಂಬರ ಜೈನ್ ದೇವಸ್ಥಾನದಲ್ಲಿ ಭಾನುವಾರ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು.
ಜ್ಞಾನೋದಯ ದಿಗಂಬರ ಜೈನ್ ಟ್ರಸ್ಟ್‌ನ ವಾರ್ಷಿಕೋತ್ಸವದ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಸಾರ್ವಜನಿಕರಲ್ಲಿ ರಕ್ತದಾನದ ಕುರಿತು ಅರಿವು ಮೂಡಿಸಲಾಯಿತು.
ಎಸ್‌ಪಿಎಂಎಲ್ ಅಧ್ಯಕ್ಷ ಅನಿಲ್ ಜಿ ಸೇಥಿ ಶಿಬಿರಕ್ಕೆ ಚಾಲನೆ ನೀಡಿ, ‘ತುರ್ತು ಸಂದರ್ಭದಲ್ಲಿ ರಕ್ತದ ಅಗತ್ಯತೆ ಇರುವಾಗ ರಕ್ತ ದೊರೆಯುವುದಿಲ್ಲ. ಇದರಿಂದ, ಇಂತಹ ರಕ್ತದಾನ ಶಿಬಿರದಲ್ಲಿ ಸಂಗ್ರಹವಾದ ರಕ್ತವನ್ನು ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.