ADVERTISEMENT

ಜೈನ ಮುನಿಗಳ ಚಾತುರ್ಮಾಸ ಮಂಗಲ ಪ್ರವೇಶ

​ಪ್ರಜಾವಾಣಿ ವಾರ್ತೆ
Published 9 ಜುಲೈ 2017, 19:36 IST
Last Updated 9 ಜುಲೈ 2017, 19:36 IST
ಜೈನ ಮುನಿಗಳ ಚಾತುರ್ಮಾಸ ಮಂಗಲ ಪ್ರವೇಶ
ಜೈನ ಮುನಿಗಳ ಚಾತುರ್ಮಾಸ ಮಂಗಲ ಪ್ರವೇಶ   

ಬೆಂಗಳೂರು: ದಿಗಂಬರ ಜೈನ ಮುನಿಗಳಾದ ಪುಷ್ಪದಂತ ಸಾಗರ, ಪ್ರಮುಖ ಸಾಗರ, ಪೂಜ್ಯ ಸಾಗರ ಮುನಿ ಮಹಾರಾಜರು ಹಾಗೂ ಕ್ಷುಲ್ಲಕ ಪುಕಾರ ಸಾಗರರು ಭಾನುವಾರ ಚಾತುರ್ಮಾಸ ಕಳಸ ಸ್ಥಾಪನೆ ನೆರವೇರಿಸಿದರು.

ಬೆಳಿಗ್ಗೆ 8ಕ್ಕೆ ಜಯನಗರದ ಸೌತ್‌ ಎಂಡ್‌ ವೃತ್ತದ ಚಕ್ರೇಶ್ವರಿ ಮಹಿಳಾ ಸಮಾಜದಿಂದ ಕೆ.ಆರ್‌.ರಸ್ತೆಯ ಕರ್ನಾಟಕ ಜೈನ ಭವನಕ್ಕೆ ಈ ಎಲ್ಲ ಮುನಿಗಳು ಮಂಗಳ ಪ್ರವೇಶ ಮಾಡಿದರು. ಪುಷ್ಪದಂತ ಸಾಗರ ಮುನಿಗಳು ದಿಗ್ವ್ರತ ಸ್ವೀಕರಿಸಿದರು.

‘ಈ ನಾಲ್ಕು ತಿಂಗಳು ಜೈನ ಧರ್ಮದವರಿಗೆ ಅತ್ಯಂತ ಪವಿತ್ರವಾದುದು. ಜೈನ ಮುನಿಗಳು ಒಂದೇ ಸ್ಥಳದಲ್ಲಿ ನಾಲ್ಕು ಮಾಸವನ್ನು ಕಳೆದು ಚಾತುರ್ಮಾಸ ಪೂರ್ಣಗೊಳಿಸುತ್ತಾರೆ. ಮುನಿಗಳು ನಿತ್ಯ ಧಾರ್ಮಿಕ ಪ್ರವಚನ ನೀಡುತ್ತಾರೆ’ ಎಂದು ಚಾತುರ್ಮಾಸ ಸಮಿತಿ ಕಾರ್ಯದರ್ಶಿ ಕೆ. ಗುಣಪಾಲ್‌ ಜೈನ್‌ ತಿಳಿಸಿದರು.
ಮುಂದಿನ ವರ್ಷ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಲು ಈ
ಎಲ್ಲ ಮುನಿಗಳು ಮಧ್ಯಪ್ರದೇಶದ ಇಂದೋರ್‌ನಿಂದ 2,000 ಕಿಲೋ ಮೀಟರ್‌ ಪ್ರಯಾಣವನ್ನು ಕಾಲ್ನಡಿಗೆ
ಯಲ್ಲಿ ಮಾಡಿ, ಸದ್ಯ ನಗರ ತಲುಪಿದ್ದಾರೆ.
ಜೈನ ಭವನದಲ್ಲಿ ಸಂಭ್ರಮದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 2,000 ಮಂದಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.