ADVERTISEMENT

ಜ್ಯೋತಿ ಕಾಲೇಜ್ ಬಿ.ಇ. ತರಗತಿ ಆರಂಭ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 20:00 IST
Last Updated 5 ಸೆಪ್ಟೆಂಬರ್ 2011, 20:00 IST

ಬೆಂಗಳೂರು: ಜ್ಯೋತಿ ಚಾರಿಟಬಲ್ ಟ್ರಸ್ಟ್ ನೂತನವಾಗಿ ಆರಂಭಿಸಿರುವ ಜ್ಯೋತಿ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಥಮ ಬಿ.ಇ. ತರಗತಿಗಳ ಉದ್ಘಾಟನಾ ಸಮಾರಂಭವನ್ನು ಸೋಮವಾರ ಆಯೋಜಿಸಿತ್ತು.

ಕಾಲೇಜಿನ ಪ್ರಾಶುಂಪಾಲ ಪ್ರೊ.ಮಹೇಂದ್ರ ಅವರು ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಅತಿಥಿಗಳಾಗಿ ಬಿ.ಕೆ.ರಮೇಶ್, ಎಂ.ನರಸಿಂಹನ್, ಬಿ.ಕೆ.ಸತ್ಯನಾರಾಯಣ, ಬಿ.ವಿ.ಸೀತಾ, ಬಿ.ವಿ.ಸುಬ್ರಹ್ಮಣ್ಯ ಮುಂತಾದವರು ಭಾಗವಹಿಸಿದ್ದರು. ಬಿ.ಎನ್.ವಿ.ಸುಬ್ರಹ್ಮಣ್ಯ ಅವರು  ಅಧ್ಯಕ್ಷತೆ ವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.