ADVERTISEMENT

ಠಾಣೆಗೊಂದು ‘ಪಿಂಕ್‌’ ಹೊಯ್ಸಳ ವಾಹನ; ಮುಖ್ಯಮಂತ್ರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 19:25 IST
Last Updated 10 ಜುಲೈ 2017, 19:25 IST
ಠಾಣೆಗೊಂದು ‘ಪಿಂಕ್‌’ ಹೊಯ್ಸಳ ವಾಹನ; ಮುಖ್ಯಮಂತ್ರಿ ಸೂಚನೆ
ಠಾಣೆಗೊಂದು ‘ಪಿಂಕ್‌’ ಹೊಯ್ಸಳ ವಾಹನ; ಮುಖ್ಯಮಂತ್ರಿ ಸೂಚನೆ   

ಬೆಂಗಳೂರು: ನಗರದಲ್ಲಿ ಮಹಿಳೆಯರ ಸುರಕ್ಷತೆಗಾಗಿ  ಪ್ರತಿ ಠಾಣೆಗೊಂದರಂತೆ ‘ಪಿಂಕ್‌’ ಹೊಯ್ಸಳ ವಾಹನ ನಿಯೋಜಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಹಿರಿಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ 110 ಠಾಣೆಗಳಿದ್ದು, ಇನ್ನೊಂದು ವಾರದಲ್ಲಿ ಅಲ್ಲೆಲ್ಲ ಪಿಂಕ್‌ ಹೊಯ್ಸಳ ವಾಹನಗಳು ಸೇವೆ ಒದಗಿಸಲಿವೆ. ತುರ್ತು ಸಂದರ್ಭದಲ್ಲಿ ಮಹಿಳೆಯರ ನೆರವಿಗೆ ವಾಹನದ ಸಿಬ್ಬಂದಿ ಹೋಗಲಿದ್ದಾರೆ’ ಎಂದರು.

‘ಮಹಿಳೆಯರ ಸರ ಕಳ್ಳತನ, ಒಂಟಿ ಮಹಿಳೆಯರ ಕೊಲೆ ಹಾಗೂ ಸುಲಿಗೆ  ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥ ಪ್ರಕರಣ ತಡೆಗೆ ಪೊಲೀಸ್‌ ಕಮಿಷನರ್‌ಗಳಿಗೆ  ಸೂಚನೆ ನೀಡಿದ್ದೇನೆ. ಎಡಿಜಿಪಿಗಳಿಗೆ ಜಿಲ್ಲಾವಾರು ಉಸ್ತುವಾರಿ ನೀಡಲಾಗಿದ್ದು, ಕಾಲ ಕಾಲಕ್ಕೆ ಆ ಜಿಲ್ಲೆಗಳಿಗೆ ಹೋಗಿ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುವಂತೆಯೂ ಹೇಳಿದ್ದೇನೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.