ADVERTISEMENT

ಡಾ. ರಾಜ್‌ಕುಮಾರ್ ಜನ್ಮ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ಯಲಹಂಕ: ಇಲ್ಲಿನ ಬಜಾರ್ ರಸ್ತೆಯ ರಣಧೀರ ಕಂಠೀರವ ಡಾ. ರಾಜ್ ಅಭಿಮಾನಿಗಳ ಸಂಘದ ವತಿಯಿಂದ ಡಾ. ರಾಜ್‌ಕುಮಾರ್ ಅವರ 84ನೇ ಜನ್ಮದಿನ ಆಚರಿಸಲಾಯಿತು.

ಅಂಧರಿಂದ ಕೇಕ್ ಕತ್ತರಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಲಾಯಿತು. ಅಭಿಮಾನಿಗಳು ಡಾ. ರಾಜ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು. ಅನ್ನದಾನ ಏರ್ಪಡಿಸಲಾಗಿತ್ತು.

ಬಿಬಿಎಂಪಿ ಸದಸ್ಯ ವೈ.ಎನ್.ಅಶ್ವಥ್, ಪಿಸಿಸಿ ಸದಸ್ಯ ಮು.ಕೃಷ್ಣಮೂರ್ತಿ, ಕೆಪಿಸಿಸಿ ಮಾಜಿ ಸದಸ್ಯ ಮಾರ್ಕಂಡೇಯ, ಸಂಘದ ಅಧ್ಯಕ್ಷ ವೈ.ಪಿ.ಚಂದ್ರಶೇಖರ್, ಉಪಾಧ್ಯಕ್ಷ ವೈ.ಸಿ.ಭಾಸ್ಕರ್ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.