ADVERTISEMENT

ಡಿಯಾಜಿಯೊ ವ್ಯವಹಾರ: ಕೋರ್ಟ್‌ಗೆ ಮಲ್ಯ ವಿವರ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:43 IST
Last Updated 25 ಸೆಪ್ಟೆಂಬರ್ 2013, 19:43 IST

ಬೆಂಗಳೂರು: ಬಹುರಾಷ್ಟ್ರೀಯ ಮದ್ಯ ತಯಾರಿಕಾ ಕಂಪೆನಿ ಡಿಯಾಜಿಯೊ ಜೊತೆಗಿನ ವ್ಯವಹಾರದ ಲೆಕ್ಕಪತ್ರ ಗಳನ್ನು ಯುನೈಟೆಡ್‌ ಬ್ರೇವರಿಸ್‌ (ಯುಬಿ) ಹೋಲ್ಡಿಂಗ್ಸ್‌ ಲಿಮಿಟೆಡ್‌ನ ಮಾಲೀಕ ವಿಜಯ್‌ ಮಲ್ಯ ಅವರು ಹೈಕೋರ್ಟ್‌ಗೆ ಬುಧವಾರ ಸಲ್ಲಿಸಿದರು.

ತಮ್ಮಿಂದ ತೆಗೆದುಕೊಂಡಿರುವ ಸಾಲವನ್ನು ಮಲ್ಯ ಅವರು ಇನ್ನೂ ತೀರಿಸಿಲ್ಲ. ಅವರ ಕಂಪೆನಿಯ ಆಸ್ತಿ ಮಾರಿಯಾದರೂ, ಸಾಲ ಮರು ಪಾವತಿ ಮಾಡುವಂತೆ ಆದೇಶ ನೀಡ ಬೇಕು ಎಂದು ಕೋರಿ ರೋಲ್ಸ್‌ ರಾಯ್ಸ್‌ ಅಂಡ್‌ ಪಾರ್ಟ್ನರ್ಸ್‌ ಕಂಪೆನಿ ಮತ್ತು ಇತರರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾ. ರಾಮ ಮೋಹನ ರೆಡ್ಡಿ ನಡೆಸುತ್ತಿದ್ದಾರೆ.

ಇದರಲ್ಲಿ ಬಿಎನ್‌ಪಿ ಪಾರಿಬಾಸ್‌ ಕೂಡ ಅರ್ಜಿಯೊಂದನ್ನು ಸಲ್ಲಿಸಿದೆ. ಪಾರಿಬಾಸ್‌ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ, ಡಿಯಾಜಿಯೊ ಜೊತೆಗಿನ ವ್ಯವಹಾರದ ಲೆಕ್ಕಪತ್ರ ಗಳನ್ನು ಸಲ್ಲಿಸಬೇಕು ಎಂದು ಪೀಠ ಇದೇ 17ರಂದು ನಿರ್ದೇಶನ ನೀಡಿತ್ತು. ಮಲ್ಯ ಸಲ್ಲಿಸಿರುವ ವಿವರಗಳಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿ ಸುವಂತೆ ಪಾರಿಬಾಸ್‌ಗೆ ನಿರ್ದೇಶನ ನೀಡಿದ ಪೀಠ, ವಿಚಾರಣೆಯನ್ನು ಅಕ್ಟೋಬರ್‌ 21ಕ್ಕೆ ಮುಂದೂಡಿದೆ.

ಮಲ್ಯ ಅವರು ಕೋರ್ಟ್‌ಗೆ ಖುದ್ದಾಗಿ ಹಾಜರಾಗಬೇಕು ಎಂದು ನ್ಯಾಯಮೂರ್ತಿಗಳು ಸೆ. 16ರಂದು ಆದೇಶಿಸಿದ್ದು ಇದೇ ಅರ್ಜಿಗಳ ವಿಚಾ ರಣೆ ಸಂದರ್ಭದಲ್ಲಿ. ಮಲ್ಯ ಅವರು ಕೋರ್ಟ್‌ಗೆ ಹಾಜರಾಗುವಾಗ ತಮ್ಮ ಪಾಸ್‌ಪೋರ್ಟ್‌ ಅನ್ನೂ ತೆಗೆದು ಕೊಂಡು ಬರಬೇಕು ಎಂದು ತಾಕೀತು ಮಾಡಲಾಗಿತ್ತು.

ಆದರೆ ಸೆ. 17ರಂದು ಮಲ್ಯ ಖುದ್ದು ಹಾಜರಾಗಲಿಲ್ಲ. ಕೋರ್ಟ್ ಆದೇಶದಂತೆ ಲೆಕ್ಕಪತ್ರಗಳ ವಿವರ ವನ್ನು ಒಂದು ವಾರದಲ್ಲಿ ಸಲ್ಲಿಸಲಾಗು ವುದು ಎಂದು ಅವರ ಪರ ವಕೀಲರ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ
ಗಳು, ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.