ADVERTISEMENT

ತ್ರಿಭಾಷಾ ಸೂತ್ರ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:15 IST
Last Updated 6 ಮಾರ್ಚ್ 2012, 19:15 IST

ಬೆಂಗಳೂರು: `ಕೇಂದ್ರ ಸರ್ಕಾರವು ತ್ರಿಭಾಷಾ ಸೂತ್ರವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು~ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮುಖ್ಯಮಂತ್ರಿ ಚಂದ್ರು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಕೇಂದ್ರಿಯ ಸದನ ಕನ್ನಡ ಸಂಘವು ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ಸಂಸ್ಕೃತಿ ಶಿಬಿರ ಮತ್ತು ಕನ್ನಡ ಕಲಿಕಾ ತರಗತಿಗಳ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

`ಎಲ್ಲ ನಾಮಫಲಕಗಳಲ್ಲಿ ಕನ್ನಡ ಮೊದಲ ಸ್ಥಾನದಲ್ಲಿರಬೇಕು. ಕನ್ನಡ ಭಾಷೆಯ ಉಪಯೋಗ ಮತ್ತು ಸಂಸ್ಕೃತಿಯು ಯಾವತ್ತೂ ಪ್ರಥಮವಾಗಿರಬೇಕು~ ಎಂದರು.ಕಾರ್ಯಕ್ರಮದಲ್ಲಿ ನಿರ್ದೇಶಕ ಬಿ.ಸುರೇಶ್, ಕೇಂದ್ರೀಯ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಎಸ್.ಎನ್.ರಾಯ್, ಆದಾಯ ತೆರಿಗೆ ಇಲಾಖೆಯ ಸಾಹಯಕ ಆಯುಕ್ತ ಅಭಿರಾಮ್ ಕಾರ್ತಿಕೇಯನ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.