ಪೀಣ್ಯ ದಾಸರಹಳ್ಳಿ: `ನಿಜಗುಣ ಟ್ರಸ್ಟ್ ನಿಂದ ದೊಡ್ಡಬಿದರಕಲ್ಲು ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳ ಮಕ್ಕಳಿಗೆ 10 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಸಮವಸ್ತ್ರ, ನೋಟ್ ಪುಸ್ತಕ ಇನ್ನಿತರ ಶಾಲಾ ಪರಿಕರಗಳನ್ನು ವಿತರಿಸುತ್ತ್ದ್ದಿದೇವೆ~ ಎಂದು ಟ್ರಸ್ಟ್ ಅಧ್ಯಕ್ಷ ಜವರಾಯಿಗೌಡ ತಿಳಿಸಿದರು.
ದೊಡ್ಡಬಿದರಕಲ್ಲು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಶಾಲಾ ಪರಿಕರಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದ ಅವರು, `ಪ್ರಚಾರಕೋಸ್ಕರ ಪುಸ್ತಕಗಳನ್ನು ವಿತರಿಸುವುದಿಲ್ಲ. ಬಡ ಮಕ್ಕಳ ಶಿಕ್ಷಣಕ್ಕೆ ಕೈಲಾದ ಸೇವೆ ಮಾಡಬೇಕೆಂಬುದೇ ನಮ್ಮ ಉದ್ದೇಶ~ ಎಂದರು.
ಪಾಲಿಕೆ ಸದಸ್ಯರಾದ ಗಾಯಿತ್ರಿ ಜವರಾಯಿಗೌಡ, ಹನುಮಂತೇಗೌಡ, ಮುಖಂಡರಾದ ಹನುಮಂತರಾಯಪ್ಪ, ಲಕ್ಕಣ್ಣ, ಗಂಗರಾಜು, ತಿಪ್ಪನಹಳ್ಳಿ ಮಂಜು, ಅಂಧ್ರಹಳ್ಳಿ ರಮೇಶ್, ಹೊಸಹಳ್ಳಿ ನಾರಾಯಣಪ್ಪ, ಅರುಣ್‌ಗೌಡ ಅಜಯ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.