ADVERTISEMENT

ನಗರದಲ್ಲಿ ಇಂದು : ಏಪ್ರಿಲ್ 8, ಭಾನುವಾರ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST

ನೇರ ತೆರಿಗೆಗಳ ಪ್ರಾದೇಶಿಕ ತರಬೇತಿ ಸಂಸ್ಥೆ: ಪ್ಲಾಟ್ ನಂ.17, ಎಚ್‌ಎಂಟಿ ಕೈ ಗಡಿಯಾರ ಕಾರ್ಖಾನೆಯ ಬಳಿ, ಜಾಲಹಳ್ಳಿ. ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಉದ್ಘಾಟನೆ. ಉದ್ಘಾಟನೆ - ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ. ಸಂಜೆ 4.30.

ಎಚ್‌ಎಎಲ್ ತೆಲುಗು ಸಾಹಿತ್ಯ ಸಮಿತಿ: ಸಭಾಂಗಣ, ಎಚ್‌ಎಎಲ್ ಪೊಲೀಸ್ ಠಾಣೆಯ ಬಳಿ. ಯುಗಾದಿ ಉತ್ಸವ. ಅತಿಥಿಗಳು - ಕೋಟ ಹರಿನಾರಾಯಣ, ಆಂಧ್ರ ಪ್ರದೇಶದ ಪರಿಸರ ಸಚಿವ ಸಿ.ರಾಮಚಂದ್ರಯ್ಯ, ಸಂಸದ ಪಿ.ಸಿ.ಮೋಹನ್, ಶಾಸಕ ನಂದೀಶ್ ರೆಡ್ಡಿ. ಬೆಳಿಗ್ಗೆ 10.

ಕಾರ್ಟ್‌ಮನ್ ಸೊಸೈಟಿ : ನಂ.870, 17 `ಇ~ ಮುಖ್ಯರಸ್ತೆ, ಕೋರಮಂಗಲ ಆರನೇ ಹಂತದಿಂದ ಕಬ್ಬನ್ ಉದ್ಯಾನವನದ ವರೆಗೆ ಸೈಕಲ್ ಜಾಥಾ. ಮುಖ್ಯ ಅತಿಥಿ - ರಿಕಿ ಕೇಜ್. ಬೆಳಿಗ್ಗೆ 6.

ಸಾಗರ್ ಆಸ್ಪತ್ರೆ: ನಂ.5, ಕೆನರಾ ಬ್ಯಾಂಕ್ ಕಟ್ಟಡ, ಕನಕಪುರ ಮುಖ್ಯರಸ್ತೆ, ಕೋಣನಕುಂಟೆ. ಸಾಗರ್ ಕ್ಲಿನಿಕ್‌ನ ಉದ್ಘಾಟನೆ. ಬೆಳಿಗ್ಗೆ 8.30.

ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿಪುರ, ಸ್ತುತಿವಾಹಿನಿ ಮತ್ತು ತಂಡದಿಂದ ಭಜನೆ. ಬೆಳಿಗ್ಗೆ 9.
ಬಿಲ್ಲವ ಅಸೋಸಿಯೇಷನ್: ನಂ. 63, ಬನ್ನೇರುಘಟ್ಟ ರಸ್ತೆ, ಮೀನಾಕ್ಷಿ ದೇವಾಲಯದ ಮುಂಭಾಗ, ಹುಳಿಮಾವು. ಉಚಿತ ವೈದ್ಯಕೀಯ ತಪಾಸಣಾ ಶಿಬಿರ. ಬೆಳಿಗ್ಗೆ 9.

ಕೇಶವ ಸಂಸ್ಕೃತಿ ಸಭಾ: ಸಂಸ್ಕೃತಿ ಭವನ,  ನಂ.556, 11ನೇ ಮುಖ್ಯರಸ್ತೆ, ಇಸ್ರೊ ಲೇಔಟ್. ರಾಮನವಮಿ ಆರಾಧನಾ ಮಹೋತ್ಸವದ ಅಂಗವಾಗಿ `ನಾದೋಪಾಸನೆ~ ಸಂಗೀತ ಕಾರ್ಯಕ್ರಮ. ಬೆಳಿಗ್ಗೆ 9.30.

ಸಮ್ಮಿಲನ: ವಲ್ಲಭನಿಕೇತನ, ಗಾಂಭವನದ ಬಳಿ, ಶಿವಾನಂದ ವೃತ್ತ, ಶೇಷಾದ್ರಿಪುರಂ, ಡಾ. ರಾಜಕುಮಾರ್ ಸಂಸ್ಮರಣಾ ಕವಿಗೋಷ್ಠಿ ಹಾಗೂ ಗೀತಗಾಯನ. ಅಧ್ಯಕ್ಷತೆ-ಕವಿ ಬಿ.ಎಸ್. ಶ್ರೀನಾಥ್, ಅತಿಥಿಗಳು-ಗಾಯಕ ಬಾಣವಾರ ಮಂಜುನಾಥ್, ಕಲಾವಿದ ಶಾಂತಕುಮಾರ್. ಬೆಳಿಗ್ಗೆ 10.30.

ಸಾಹಿತ್ಯ ಸಿಂಧು ಪ್ರಕಾಶನ: ಯವನಿಕಾ ಸಭಾಂಗಣ. ನೃಪತುಂಗ ರಸ್ತೆ. ವಾಯ್ಸ ಆಫ್ ಇಂಡಿಯಾ ಸಾಹಿತ್ಯ ಸರಣಿಯ ಎಂಟು ಪುಸ್ತಕಗಳ ಲೋಕಾರ್ಪಣೆ. ಸಾಹಿತಿ ಮುಜಫರ್ ಹುಸೇನ್ ಅವರಿಂದ ಕೃತಿಗಳ ಬಿಡುಗಡೆ. ಅಧ್ಯಕ್ಷತೆ- ಸಾಹಿತಿ ಎಸ್.ಎಲ್.ಭೈರಪ್ಪ. ಬೆಳಿಗ್ಗೆ 10.30.

ಬೆಂಗಳೂರು ಆರ್ಯ ವೈಶ್ಯ ಮಂಡಳಿಗಳ ಒಕ್ಕೂಟ: ಸ್ವಾತಂತ್ರ್ಯ ಉದ್ಯಾನವನ, ಶೇಷಾದ್ರಿ ರಸ್ತೆ. ಸುಬ್ರಹ್ಮಣ್ಯಸ್ವಾಮಿ ಕಲ್ಯಾಣೋತ್ಸವ. ಬೆಳಿಗ್ಗೆ 10.30.

ಅಭಿನವ ಪ್ರಕಾಶನ: `ಚಾವಡಿ~ ಸಭಾಂಗಣ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ. ವಿ.ಆರ್.ಕಾಪೆಂಟರ್ ಅವರ `ಅಪ್ಪನ ಪ್ರೇಯಸಿ~ ಕಾದಂಬರಿ ಪುಸ್ತಕದ ಬಿಡುಗಡೆ. ಅತಿಥಿಗಳು - ಕತೆಗಾರ ಅಬ್ದುಲ್ ರಶೀದ್, ಪತ್ರಕರ್ತರಾದ ರವೀಂದ್ರ ರೇಷ್ಮೆ, ಟಿ.ಕೆ.ತ್ಯಾಗರಾಜ್, ಕವಿ ಸುಬ್ಬು ಹೊಲೆಯಾರ್. ಬೆಳಿಗ್ಗೆ 11.30.

ಡಿಗ್ನಿಟಿ ಸಂಘಟನೆ : ಪ್ರಮಿಳಾ ಬಾಯಿ ಮಾನೆ ಬಿಬಿಎಂಪಿ ಶಾಲೆ, 3ನೇ ಅಡ್ಡರಸ್ತೆ, ವಿದ್ಯಾರಣ್ಯ ನಗರ, ವಿಜಯನಗರ. `ಡಿಗ್ನಿಟಿ ಡೈಲಾಗ್~ ನಿಯತಕಾಲಿಕೆಯ 17ನೇ ವಾರ್ಷಿಕೋತ್ಸವ. ಅಮಿತಾಸನ ದಾಸ್ ಪ್ರಭು ಅವರಿಂದ `ಭಕ್ತಿ~ ಕುರಿತು ಉಪನ್ಯಾಸ, ನಂತರ ಮಾನಸಿ ಪ್ರಸಾದ್ ಅವರಿಂದ ಗಾಯನ. ಮಧ್ಯಾಹ್ನ 3.

ಕರ್ನಾಟಕ ಲೇಖಕಿಯರ ಸಂಘ: `ಚಾವಡಿ~ ಸಭಾಂಗಣ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ. ಸಾಹಿತ್ಯ ವಿಹಾರ ಕಾರ್ಯಕ್ರಮ. ಅತಿಥಿಗಳು - ಪ್ರೊ.ಎನ್.ಎನ್.ಲೀಲಾ ಮತ್ತು ನಾಗರತ್ನ ಚಂದ್ರಶೇಖರ್. ಅಧ್ಯಕ್ಷತೆ - ವಸುಂಧರಾ ಭೂಪತಿ. ಮಧ್ಯಾಹ್ನ 3.30.

ಸ್ನೇಹ ಬುಕ್ ಹೌಸ್: ಜೆಎಸ್‌ಎಸ್ ಸಭಾಂಗಣ, ಜಯನಗರ ಎಂಟನೇ ಹಂತ. ಲೇಖಕಿ ಸಂಧ್ಯಾ ಪೈ ಅವರ 20 ಪುಸ್ತಕಗಳ ಬಿಡುಗಡೆ. ಅತಿಥಿಗಳು - ಗಾಯಕ ವಿದ್ಯಾಭೂಷಣ, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಟಿ.ಸತೀಶ್ ಯು. ಪೈ. ಚಲನಚಿತ್ರ ನಟಿ ನೀತು, ನಟ ಶ್ರೀನಿವಾಸ ಪ್ರಭು. ಅಧ್ಯಕ್ಷತೆ- ಹಿರಿಯ ಪತ್ರಕರ್ತ ಎಸ್.ವಿ.ಜಯಶೀಲರಾವ್. ಸಂಜೆ 5.

ಅಕ್ಕ ಮಹಾದೇವಿ ಮಹಿಳಾ ಸಮಾಜ ಮತ್ತು ಬಸವ ಕೇಂದ್ರ :  ಎಚ್.ಕೆ.ಆರ್ ಕಲ್ಯಾಣ ಮಂಟಪ, ಹೆಸರಘಟ್ಟ ಮುಖ್ಯರಸ್ತೆ, ಟಿ.ದಾಸರಹಳ್ಳಿ. ಶರಣ ಸಂಗಮ ಹಾಗೂ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ಅವರ 105 ನೇ ಹುಟ್ಟುಹಬ್ಬ ಸಮಾರಂಭ. ಸಾನ್ನಿಧ್ಯ - ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಶಿವಗಂಗೆಯ ಹೊನ್ನಮ್ಮಗವಿಮಠದ ರುದ್ರಮೂರ್ತಿ ಶಿವಾಚಾರ್ಯ ಸ್ವಾಮೀಜಿ. ಸಂಜೆ 5.30.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್: ಬಿ.ಪಿ.ವಾಡಿಯಾ ರಸ್ತೆ, ಬಸನವನಗುಡಿ. ಗಾರ್ಗಿ ಶರ್ಮ ಅವರಿಂದ ಭರತನಾಟ್ಯ ಪ್ರದರ್ಶನ. ಸಂಜೆ 6.

ರಾಮಸೇವಾ ಮಂಡಳಿ : ಸರ್ಕಾರಿ ಜೂನಿಯರ್ ಕಾಲೇಜು, ಬೆಂಗಳೂರು ಕೋಟೆ ಹೈಸ್ಕೂಲ್ ಆವರಣ. ರಾಮನವಮಿ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಬೆಳಿಗ್ಗೆ 10ಕ್ಕೆ ಸಂಸ್ಥಾಪಕರ ದಿನಾಚರಣೆ, ಸಂಜೆ 6.30ಕ್ಕೆ ಯು.ಶ್ರೀನಿವಾಸ್ ಮತ್ತು ಯು.ರಾಜೇಶ್ ಅವರ ದ್ವಂದ್ವ ಮಾಂಡೊಲಿನ್ ವಾದನ.

ವಾಣಿ ವಿದ್ಯಾ ಕೇಂದ್ರ : ಶಾಮವನ, ಸಿ.ಎ.ಸೈಟ್ ನಂ. 1, 4 `ಬಿ~ ಮುಖ್ಯ ರಸ್ತೆ, 3ನೇ ಹಂತ, ಬಸವೇಶ್ವರನಗರ. ರಾಮನವಮಿ ಸಂಗೀತೋತ್ಸವದಲ್ಲಿ ಎಂ.ಎಸ್.ಶೀಲಾ ಅವರ ಗಾಯನ, ಜ್ಯೋತ್ಸಾ ್ನ ಶ್ರೀಕಾಂತ್ (ಪಿಟೀಲು), ತುಮಕೂರು ಬಿ. ರವಿಶಂಕರ್ (ಮೃದಂಗ), ಎಂ.ಎ.ಕೃಷ್ಣಮೂರ್ತಿ (ಘಟ). ಸಂಜೆ 6.30.

ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ : ಸುಚಿತ್ರ ಸಭಾಂಗಣ, ನಂ.36, ಬಿ.ವಿ. ಕಾರಂತ ರಸ್ತೆ, ಬನಶಂಕರಿ 2ನೇ ಹಂತ, ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ಲೇಖಕಿ ಶಾಂತಾ ನಾಗರಾಜ್ ಅವರಿಂದ ` ವಿಭಿನ್ನ ಪ್ರತಿಮಾಲೋಕಗಳ ನಡುವೆ~ ಕುರಿತು ಉಪನ್ಯಾಸ, ಹಾಗೂ ಎನ್. ಮಂಗಳಾ ನಿರ್ದೇಶನದ        `ವ್ಯಾನಿಟಿ ಬ್ಯಾಗ್~ ನಾಟಕ ಪ್ರದರ್ಶನ. ಸಂಜೆ 6.

ಮಹಾತ್ಮ ಗಾಂಧಿ ಸ್ಮೃತಿ ಸಮಿತಿ: ಬಸವೇಶ್ವರನಗರ, `ಭಗವಾನ್ ರಬ್ಬಿನಿತ್ಯಾನಂದಂ~ ಅವರ ಆರಾಧನಾ ಮಹೋತ್ಸವ ಬೆಳಿಗ್ಗೆ 9.30ಕ್ಕೆ ಚಳ್ಳಕೆರೆ ಸಹೋದರರಿಂದ ವೇದಘೋಷ, 10.45ಕ್ಕೆ ನಾಗನಂದಿನಿ ವಿಶ್ವನಾಥ್ ಮತ್ತು ತಂಡದಿಂದ ಭಜನೆ, ಮಧ್ಯಾಹ್ನ 12ಕ್ಕೆ ಜ್ಯೋತಿ ಪಟ್ಟಾಬಿರಾಮ್ ಅವರಿಂದ ಉಪನ್ಯಾಸ, 12.30ಕ್ಕೆ ಪಟ್ಟಾಭಿರಾಮ್ ಅವರಿಂದ ಧ್ಯಾನ ಮತ್ತು ಉಪನ್ಯಾಸ.

ವಿವೇಕಾನಂದ ವಿದ್ಯಾರ್ಥಿ ನಿಲಯ ಮತ್ತು ರಂಗನಾಯಕಿ ಕಲಾ ಮಂದಿರ: ನಂ.21/22, ಜೈನ್ ದೇವಸ್ಥಾನದ ರಸ್ತೆ, ಜೈನ್ ದೇವಸ್ಥಾನದ ಎದುರು, ವಿಶ್ವೇಶ್ವರಪುರಂ. `ನಾದ-ಭಾವ-ತರಂಗ~ ಕಾರ್ಯಕ್ರಮದಲ್ಲಿ ಸ್ಮಿತಾ ಬೆಳ್ಳೂರ್ ಅವರಿಂದ ಗಾಯನ, ವ್ಯಾಖ್ಯಾನ- ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ. ಸಂಜೆ 6.

ರಾಮ ಕೃಪಾ ಪೋಷಿತ ನಾಟಕ ಮಂಡಳಿ : ಅಂದ್ರಹಳ್ಳಿ, ಮಾಗಡಿ ರಸ್ತೆ. `ಸುಂದರ ಕಾಂಡ~ ನಾಟಕ ಪ್ರದರ್ಶನ. ರಾತ್ರಿ10.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.