ಬೆಂಗಳೂರು: ಬೇಸಿಗೆಯ ತಾಪಕ್ಕೆ ಬಸವಳಿದಿದ್ದ ನಗರದ ಜನತೆಗೆ ಶನಿವಾರ ರಾತ್ರಿ ಸುರಿದ ಮಳೆಯು ತಂಪೆರೆಯಿತು.
‘ನಗರದ ಒಳಭಾಗದಲ್ಲಿ 3.8 ಮಿ.ಮೀ ಮಳೆಯಾಗಿದೆ’ ಎಂದು ಹವಮಾನ ತಜ್ಞರು ತಿಳಿಸಿದರು.
ರಾತ್ರಿ 7.30ರ ಸುಮಾರಿಗೆ ನಗರದ ದಕ್ಷಿಣ ಭಾಗದಿಂದ ಆರಂಭವಾದ ಮಳೆ, ಕ್ರಮೇಣ ನಗರದೆಲ್ಲೆಡೆ ಸುರಿಯಿತು. ಕೇವಲ 15 ನಿಮಿಷ ಮಳೆ ಸುರಿದರೂ ಮೆಜೆಸ್ಟಿಕ್, ಶಿವಾಜಿನಗರ, ಕೆ.ಆರ್. ಮಾರುಕಟ್ಟೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ವಾಹನ ದಟ್ಟಣೆ ಉಂಟಾಯಿತು.
ಇನ್ನೂ ಕೆಲವೆಡೆ ರಾತ್ರಿ 10 ಗಂಟೆಯಾದರೂ ಮಳೆ ಜಿಟಿ ಜಿಟಿ ಯಾಗಿ ಸುರಿಯುತ್ತಲೇ ಇತ್ತು. ಧೂಳಿ ನಿಂದ ಕೂಡಿದ್ದ ನಗರದ ರಸ್ತೆಗಳು ಮಳೆ ಯಿಂದಾಗಿ ಮೈತೊಳೆದು ಕೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.