ADVERTISEMENT

ನಾಳೆ ಜೆ.ಪಿ.ನಗರ ಅಂಡರ್‌ಪಾಸ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 20:30 IST
Last Updated 16 ಜನವರಿ 2011, 20:30 IST

ಬೆಂಗಳೂರು: ಜೆ.ಪಿ.ನಗರದ ವರ್ತುಲ ರಸ್ತೆಯಲ್ಲಿ ಬಿಬಿಎಂಪಿ ಆರಂಭಿಸಿದ್ದ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಕೊನೆಗೂ ಪೂರ್ಣಗೊಂಡಿದ್ದು, ಇದೇ 18ರಂದು ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.

ಜೆ.ಪಿ.ನಗರ 24ನೇ ಮುಖ್ಯರಸ್ತೆ, 15ನೇ ಅಡ್ಡರಸ್ತೆ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ನಿರ್ಮಿಸುವ ಕಾಮಗಾರಿ 2008ರ ಮಾರ್ಚ್ 7ರಂದು ಆರಂಭವಾಗಿತ್ತು. ಹತ್ತು ತಿಂಗಳಲ್ಲಿ ಅಂದರೆ 2009ರ ಜನವರಿ 10ಕ್ಕೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಪಾಲಿಕೆ ಪ್ರಕಟಿಸಿತ್ತು.

ಆದರೆ ಜಲಮಂಡಳಿ ಕೊಳವೆ ಸ್ಥಳಾಂತರ, ಬೆಸ್ಕಾಂನ ಕೇಬಲ್‌ಗಳ ಸ್ಥಳಾಂತರ ಕಾರ್ಯ ವಿಳಂಬವಾಗಿತ್ತು. ಅಲ್ಲದೇ ಗುತ್ತಿಗೆದಾರ ಸಂಸ್ಥೆ ನಿರ್ಲಕ್ಷ್ಯ ತೋರಿದ್ದರಿಂದ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಲಿಲ್ಲ. ಒಟ್ಟು 471.61 ಮೀಟರ್ ಉದ್ದದ ಈ ಕಾಮಗಾರಿಗೆ ರೂ 22.99 ಕೋಟಿ  ವೆಚ್ಚವಾಗಿದೆ. 4 ಪಥದ ರಸ್ತೆ, ಸರ್ವೀಸ್ ರಸ್ತೆ ಕೂಡ ನಿರ್ಮಾಣವಾಗಿದೆ.

ADVERTISEMENT

ಇದೇ 18ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ನೂತನ ಅಂಡರ್‌ಪಾಸ್ ಉದ್ಘಾಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.