ADVERTISEMENT

ನಾಳೆ ನಗೆ ಜಾಗರಣೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:40 IST
Last Updated 18 ಫೆಬ್ರುವರಿ 2012, 19:40 IST

ಬೆಂಗಳೂರು: `ಜಾಣ ಜಾಣೆಯರು~ ತಂಡವು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಫೆ. 20 ರಂದು ಶೇಷಾದ್ರಿಪುರದ ಸಿರೂರು ಪಾರ್ಕ್‌ನಲ್ಲಿ ಅಹೋರಾತ್ರಿ `ನಗೆ ಜಾಗರಣೆ~ ಮನರಂಜನಾ ಕಾರ್ಯಕ್ರಮ ಆಯೋಜಿಸಿದೆ.

ಅಂದು ಸಂಜೆ 7.30ರಿಂದ ಪ್ರಾರಂಭವಾಗಲಿರುವ ಈ ನಗೆ ಜಾಗರಣೆಯಲ್ಲಿ ಹಾಸ್ಯ ಭಾಷಣಕಾರರಾದ ಪ್ರಾಣೇಶ್ ಗಂಗಾವತಿ, ನರಸಿಂಹ ಜೋಷಿ, ಬಸವರಾಜ ಮಹಾಮನಿ, ರವಿ ಭಜಂತ್ರಿ ಬೆಳಗಾವಿ, ಮಹದೇವ ಸತ್ತಿಗೇರಿ, ಅಸದುಲ್ಲಾ ಬೇಗ್, ಕೋಗಳಿ ಕೊಟ್ರೇಶ್, ಡಾ.ಬೆಣ್ಣೆ ಬಸವರಾಜು, ಗುಂಡಣ್ಣ ಡಿಗ್ಗಿ ಮೊದಲಾದವರು ರಂಜಿಸಲಿದ್ದಾರೆ.

ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಈ ಬಾರಿ ಉತ್ತರ ಕರ್ನಾಟಕದ ಜತೆಗೆ, ದಕ್ಷಿಣ ಕನ್ನಡ ಹಾಗೂ ಬಯಲುಸೀಮೆಯ ಹಾಸ್ಯ ಕಲಾವಿದರು ಸೇರಲಿರುವುದರಿಂದ ಇದು ಶಿವರಾತ್ರಿ ಮುಪ್ಪರಿ ಮೇಳವಾಗಲಿದೆ.

ಖ್ಯಾತ ಜಾದೂಗಾರ ಪ್ರಹ್ಲಾದಾಚಾರ್ಯ ಶಾಡೋ ಪ್ಲೇ ಹಾಗೂ ಮಾತನಾಡುವ ಗೊಂಬೆ ಕಾರ್ಯಕ್ರಮ ನಡೆಸಿಕೊಟ್ಟರೆ, `ಸಿಹಿ ಕಹಿ~ ಚಂದ್ರು `ಮಧ್ಯರಾತ್ರಿ ಪರಪ್ಪನ (ಅಗ್ರ...ರ)~ ಕುರಿತು ಹರಿಕಥೆಯನ್ನು ತಮ್ಮದೇ ಆದ ಶೈಲಿಯಲ್ಲಿ ನಡೆಸಿಕೊಟ್ಟು ನಗಿಸಿ ನಲಿಸಲಿದ್ದಾರೆ. `ದಯಾನಂದ ಲೋಕ~ದಲ್ಲಿ ಮಿಮಿಕ್ರಿ ದಯಾನಂದ ಮತ್ತು ತಂಡದಿಂದ ನಗೆಯ ಕಾರ್ಯಕ್ರಮ ವಿದೆ. ಹೆಚ್ಚಿನ ಮಾಹಿತಿಗೆ ಪಿ. ಸದಾಶಿವ್: 98440 23561 ಅಥವಾ ಲಕ್ಷ್ಮೀನಾರಾಯಣ್: 96206 92325 ಸಂಪರ್ಕಿಸಬಹುದು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.