
ಬೆಂಗಳೂರು: ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿರುವ ಹಿರಿಯ ಚಿತ್ರ ನಿರ್ದೇಶಕ ಗೀತಪ್ರಿಯ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ನೀಡಲಾದ ಒಂದು ಲಕ್ಷ ರೂಪಾಯಿ ಚೆಕ್ ಅನ್ನು ಉಪ ಮೇಯರ್ ಎಸ್.ಹರೀಶ್ ಶುಕ್ರವಾರ ವಿತರಿಸಿದರು.
ಗೀತಪ್ರಿಯ ಎಂದೇ ಪ್ರಸಿದ್ಧರಾದ ಲಕ್ಷ್ಮಣರಾವ್ ಮೋಹಿದೆ ಅವರ ಮಹಾಲಕ್ಷ್ಮೀ ಬಡಾವಣೆಯ ನಿವಾಸಕ್ಕೆ ಭೇಟಿ ನೀಡಿದ ಹರೀಶ್ ಚೆಕ್ ವಿತರಿಸಿದರು.
ನಂತರ ಮಾತನಾಡಿದ ಹರೀಶ್, `ಡಾ.ರಾಜ್‌ಕುಮಾರ್ ಅವರ ಅಮೋಘ ಅಭಿನಯದ ಮಣ್ಣಿನ ಮಗ ಸೇರಿದಂತೆ ಹಲವು ಉತ್ತಮ ಚಿತ್ರಗಳನ್ನು ಗೀತಪ್ರಿಯ ಅವರು ಕೊಡುಗೆಯಾಗಿ ನೀಡಿದ್ದಾರೆ. ಅವರ ಸಾಮಾಜಿಕ ಕಳಕಳಿ ಎಂದೆಂದಿಗೂ ಸ್ಮರಣಾರ್ಹ. ಗೀತಪ್ರಿಯರಿಗೆ ಕನ್ನಡ ಚಿತ್ರೋದ್ಯಮದವರು ನೆರವು ನೀಡಬೇಕು. ಗೀತಪ್ರಿಯ ಅವರು ಆದಷ್ಟು ಬೇಗ ಗುಣಮುಖರಾಗಲಿ~ ಎಂದು ಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.