ಬೆಂಗಳೂರು: ಕಳೆದ 23-24ರಂದು ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಜರುಗಿದ ‘ಕಾಂಟಿನೆಂಟಲ್ ಯೋಗ ಚಾಂಪಿಯನ್‌ಶಿಪ್’ ಸ್ಪರ್ಧೆಯಲ್ಲಿ ವಿಜೇತರಾದ ರಾಜ್ಯದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಅವರವರ ಊರುಗಳಲ್ಲಿ ನಿವೇಶನವನ್ನು ಮಂಜೂರು ಮಾಡಬೇಕು’ ಎಂದು ಕೊಳದ ಮಠದ ಶಾಂತವೀರ ಸ್ವಾಮೀಜಿ ಸರ್ಕಾರಕ್ಕೆ ಮನವಿ ಮಾಡಿದರು.
ವಿಜೇತರಾದ ಅಭ್ಯರ್ಥಿಗಳು ತಮ್ಮ ಸಾಧನೆಯ ವಿವರಗಳನ್ನು ನೀಡಲು ನಗರದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ಯಾವ್ಯಾವುದಕ್ಕೋ ಕೋಟ್ಯಂತರ ಹಣ ಖರ್ಚು ಮಾಡುವ ಸರ್ಕಾರ, ಯೋಗ ಸ್ಪರ್ಧೆಯಲ್ಲಿ ರಾಜ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಈ ಕ್ರೀಡಾಪಟುಗಳಿಗೆ ನಿವೇಶನ ಮಂಜೂರು ಮಾಡಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
ಬ್ಯಾಂಕಾಕ್‌ನ ಪಟ್ಟಾಯದ ಫೆರಿಟೆಕ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಭಾರತ, ಥೈಲ್ಯಾಂಡ್, ವಿಯೆಟ್ನಾಂ, ರಷ್ಯ, ಸಿಂಗಪುರ, ಮಲೇಶಿಯಾ ಹಾಗೂ ಇರಾಕ್ ದೇಶಗಳ 72 ಯೋಗ ಪಟುಗಳು ಭಾಗವಹಿಸಿದ್ದರು.
ಗೋಷ್ಠಿಯಲ್ಲಿ ಯೋಗ ಫೆಡರೇಶನ್‌ನ ವ್ಯವಸ್ಥಾಪಕ ಎಂ.ವಿ.ಗೋಪಾಲ್, ಶಶಿಕಲಾ ಗೋಪಾಲ್ ಇದ್ದರು.
ಸ್ಪರ್ಧಾ ವಿಜೇತರ ವಿವರ:
ಎಸ್.ವಿ.ಸುಮಿತ್-3 ಚಿನ್ನದ ಪದಕದೊಂದಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ. ಡಿ.ಪುರುಷೋತ್ತಮ-3 ಚಿನ್ನದ ಪದಕದೊಂದಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ. ಅನಿಲ್‌ಕುಮಾರ್ ಶೆಟ್ಟರ್-3 ಚಿನ್ನದ ಪದಕದೊಂದಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ. ಎನ್.ಯೋಗರಾಜ್-3 ಚಿನ್ನದ ಪದಕ. ಪ್ರಸನ್ನ-3 ಚಿನ್ನದ ಪದಕ. ಜೆ.ದೀಪಕ್-3 ಚಿನ್ನದ ಪದಕ, ಅಭಿಷೇಕ್-2 ಚಿನ್ನ, 1 ರಜತ. ಪ್ರೇಮ್‌ಕುಮಾರ್-1 ಚಿನ್ನ, 2 ರಜತ ಪದಕ.
ಮಹಿಳಾ ಯೋಗಪಟುಗಳು
ಅಂಕಿತ ಎಂ.ಗೋಪಾಲ್-3 ಚಿನ್ನದ ಪದಕದೊಂದಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ. ಪಿ.ಜಿ.ನಾಗವೀಣ-2 ಚಿನ್ನ, 1 ಕಂಚು. ಸಿ.ಎಂ.ಭಾರತಿ-1 ಚಿನ್ನ, 2 ರಜತ ಪದಕ. ಆರ್.ಉಮಾದೇವಿ-ತಲಾ ಒಂದು ಚಿನ್ನ, ರಜತ ಮತ್ತು ಕಂಚಿನ ಪದಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.