ADVERTISEMENT

ನೀರಿನ ಪರ್ಯಾಯ ಮೂಲ: ಸಲಹೆಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಲಿಯು ಮುಂದಿನ 50 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕುಡಿಯುವ ನೀರಿನ ಪರ್ಯಾಯ ಮೂಲಗಳನ್ನು ಶೋಧಿಸಿ ಶಿಫಾರಸು ಮಾಡುವ ಸಲುವಾಗಿ ಜಲಮಂಡಲಿಯ ನಿವೃತ್ತ ಅಧ್ಯಕ್ಷ ಬಿ.ಎನ್.ತ್ಯಾಗರಾಜ್ ನೇತೃತ್ವದಲ್ಲಿ ಸದಸ್ಯರ ಸಮಿತಿ ರಚಿಸಿದ್ದು, ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ ಸಲಹೆಗಳನ್ನು ಆಹ್ವಾನಿಸಿದೆ.

ಅಲ್ಪಾವಧಿ ಹಾಗೂ ದೀರ್ಘಾವಧಿ ನೀರು ಸರಬರಾಜು ಸಂಬಂಧಿಸಿದಂತೆ ಸಲಹೆಗಳನ್ನು ಈ ಕೆಳಕಂಡ ವಿಳಾಸಕ್ಕೆ ಇದೇ 31 ರೊಳಗೆ ಕಳುಹಿಸಬಹುದು. ಸಂಚಾಲಕರು, 5ನೇ ಮಹಡಿ, ಬೆಂಗಳೂರು ಜಲ ಮಂಡಲಿ, ಕೆಂಪೇಗೌಡರಸ್ತೆ. ವೆಬ್ ವಿಳಾಸ: : cecd@bwssb.org.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.