ADVERTISEMENT

ಪತ್ನಿಯನ್ನು ಕೊಂದ ಆರೋಪಿ ಬಂಧನ

ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2013, 19:48 IST
Last Updated 1 ಡಿಸೆಂಬರ್ 2013, 19:48 IST

ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಮತ್ತೀಕೆರೆ ಸಮೀಪದ ಎ.ಕೆ. ಕಾಲೋನಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಎ.ಕೆ.ಕಾಲೊನಿ ನಿವಾಸಿ ಪ್ರೇಮಾ ಕುಮಾರಿ (19) ಕೊಲೆಯಾದವರು. ಆರೋಪಿ ಪತಿ ಗಂಗರಾಜುನನ್ನು (23) ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಆತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯಲ್ಲಿ (ಇಸ್ರೊ)  ಹೊರಗುತ್ತಿಗೆಯಲ್ಲಿ ಎಲೆಕ್ಟ್ರೀಷಿಯನ್‌ ಆಗಿ ಕೆಲಸ ಮಾಡುತ್ತಿದ್ದ. ರಾತ್ರಿ ಒಂದು ಗಂಟೆ ಸುಮಾರಿಗೆ ದಂಪತಿ ನಡುವೆ ಜಗಳವಾಗಿದ್ದು, ಆರೋಪಿ, ಪತ್ನಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕೃತ್ಯದ ನಂತರ ಪ್ರೇಮಾ ಅವರ ತಂದೆ ಮಂಜುನಾಥ್‌ ಅವರಿಗೆ ಕರೆ ಮಾಡಿ ರುವ ಆರೋಪಿ, ‘ಪತ್ನಿ ವಿಷ ಕುಡಿದಿದ್ದಾಳೆ’ ಎಂದು ಹೇಳಿದ್ದಾನೆ.

ಇದ ರಿಂದ ಗಾಬರಿಗೊಂಡ ಅವರು ಕೂಡಲೇ ಸ್ಥಳಕ್ಕೆ ಬಂದ ಮಗಳನ್ನು ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ದಾಖ ಲಿಸಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಪ್ರೇಮಾ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಮೊದಲು  ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆ ಸಲಾಗುತ್ತಿತ್ತು. ಆದರೆ, ‘ಗಂಗರಾಜು ಈ ಮೊದಲು ಬೇರೊಬ್ಬ ಯುವತಿ ಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ.

ADVERTISEMENT

ಆಕೆಯಿಂದ ದೂರ ಮಾಡುವ ಸಲು ವಾಗಿ ಅತ್ತೆ ಮಗಳಾದ ಪ್ರೇಮಾ ಜತೆ ಜು. 29ರಂದು ಮದುವೆ ಮಾಡ ಲಾಗಿತ್ತು. ವಿವಾಹದ ನಂತರವೂ ಆತ ಆ ಯುವತಿಯೊಂದಿಗೆ ಸಂಪರ್ಕದ ಲ್ಲಿದ್ದ. ಈ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು’ ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದರು.

ಅಲ್ಲದೇ, ಭಾನುವಾರ ಬೆಳಿಗ್ಗೆ ವರದಿ ನೀಡಿದ ವೈದ್ಯರು, ಪ್ರೇಮಾ ವಿಷ ಕುಡಿದಿಲ್ಲ ಎಂಬುದನ್ನು ದೃಢಪಡಿ ಸಿದರು. ಹೀಗಾಗಿ, ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬಯಲಾ ಯಿತು ಎಂದು ಪೊಲೀಸರು ಹೇಳಿದ್ದಾರೆ. ‘ಮೂರು ದಿನಗಳಿಂದ ಪತ್ನಿ ತುಂಬಾ ಜಗಳ ಮಾಡುತ್ತಿದ್ದಳು. ಕೆಲಸ ಜಾಸ್ತಿ ಇದ್ದುದರಿಂದ ರಾತ್ರಿ ಮನೆಗೆ ಹೋಗು ವುದು ತಡವಾಯಿತು. ಇದನ್ನು ಪ್ರಶ್ನಿ ಸಿದ ಪತ್ನಿ, ಗಲಾಟೆಗೆ ಮುಂದಾದಳು. ಕೋಪದ ಭರದಲ್ಲಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾನೆ. ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.