ADVERTISEMENT

`ಪರಿಶಿಷ್ಟ ಜಾತಿ ಗುಂಪಿಗೆ ಮಡಿವಾಳ ಜನಾಂಗ ಸೇರಿಸಿ'

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 20:09 IST
Last Updated 25 ಡಿಸೆಂಬರ್ 2012, 20:09 IST

ಹೊಸಕೋಟೆ: `ಕುಲಕಸಬು ನಡೆಸಲಾಗದೆ ಸಂಕಷ್ಟದಲ್ಲಿರುವ ಮಡಿವಾಳ ಜನಾಂಗದವರಿಗೆ ಸಾಮಾಜಿಕ ಭದ್ರತೆ, ನ್ಯಾಯ, ರಕ್ಷಣೆ ನೀಡುವ ನಿಟ್ಟಿನಲ್ಲಿ ಆ ಸಮುದಾಯವನ್ನು ಪರಿಶಿಷ್ಟ ಜಾತಿ ಗುಂಪಿಗೆ ಸೇರಿಸಬೇಕು' ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಒತ್ತಾಯಿಸಿದರು.

ಹೊಸಕೋಟೆ ತಾಲ್ಲೂಕು ಮಾಚಿದೇವರ ಮಡಿವಾಳ ಸಂಘವು ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಾಚಿದೇವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಶಂಕರಪ್ಪ ಮಾತನಾಡಿ, `ರಾಜ್ಯದಲ್ಲಿ 20 ಲಕ್ಷ ಮಡಿವಾಳರಿದ್ದು ಅವರು ಸ್ವಾಭಿಮಾನಿಗಳಾಗಿ ಸಂಘಟಿತರಾಗಬೇಕು' ಎಂದರು.

ಶಿವಯೋಗಾನಂದಪುರ ಸ್ವಾಮೀಜಿ ಮಾತನಾಡಿ `ಸಮಾಜದಲ್ಲಿ ಪರಿವರ್ತನೆ ತರಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು' ಎಂದು ಸಮಾಜ ಬಾಂಧವರಿಗೆ ಸಲಹೆ ನೀಡಿದರು.

ಐಪಿಎಸ್ ಅಧಿಕಾರಿ ಎಸ್.ಪಿ.ವೆಂಕಟೇಶ್, ಸಮುದಾಯದ ಮುಖಂಡ ಜಿ.ಡಿ.ಗೋಪಾಲ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ, ಗುರುಮಂದಿರ, ದೋಭಿಘಾಟ್ ಅನ್ನು ಉದ್ಘಾಟಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.