ಬೆಂಗಳೂರು: ಅಗ್ನಿ ಅನಾಹುತದಿಂದ ಹಾನಿಗೀಡಾದ ಶಿವಾಜಿ ನಗರದ ರಸೆಲ್ ಮಾರುಕಟ್ಟೆಯ ಸಂತ್ರಸ್ತ ವ್ಯಾಪಾರಿಗಳಿಗೆ ಪಾಲಿಕೆ ವತಿಯಿಂದ 8 ರಿಂದ 50 ಸಾವಿರ ರೂಪಾಯಿವರೆಗಿನ ಪರಿಹಾರ ಚೆಕ್‌ನ್ನು ಗುರುವಾರ ವಿತರಿಸಲಾಯಿತು.
ಪಾಲಿಕೆ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ಪರಿಹಾರ ಚೆಕ್ ವಿತರಿಸಲಾಯಿತು. ಶಾಸಕ ಆರ್. ರೋಷನ್ ಬೇಗ್ ಸಂತ್ರಸ್ತ ವ್ಯಾಪಾರಿಗಳಿಗೆ ಚೆಕ್ ವಿತರಿಸಿದರು.ಮಾರುಕಟ್ಟೆಯ ವ್ಯಾಪಾರಿಗಳ ಸಂಘದಿಂದ ಬಡವರಿಗೆ ಊಟ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ಸಭಾ ಉಪ ಸಭಾಪತಿ ಕೆ.ರೆಹಮಾನ್‌ಖಾನ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.