ADVERTISEMENT

ಪಾತ್ರೆ ಕುಕ್ಕುವ ಪತ್ನಿ ಪ್ರೆಷರ್ ಕುಕ್ಕರಿನಂತೆ !

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST

ಬೆಂಗಳೂರು:  ಯುಗಾದಿ ಹಬ್ಬದ ಪ್ರಯುಕ್ತ ಸಮನ್ವಯ ವೇದಿಕೆಯು ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಸಂತ ಸಂಭ್ರಮದ ಕಾಯಕ್ರಮದಲ್ಲಿ ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್ ಅವರು ತಮ್ಮ ಹಾಸ್ಯ ಚಟಾಕಿಯಿಂದ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು.

`ಗಂಡ ಹೆಂಡತಿಯರ ಜಗಳ ಒಂದು ರೀತಿಯ ಅಡುಗೆ ಮನೆಯ ಸಾಮಾನಿನಂತೆ. ಸದಾ ಪ್ರತಿಷ್ಠೆ ಹೊಂದಿರುವುದರಿಂದ ಗಂಡ ಪ್ರೆಸ್ಟಿಜ್ ಕುಕ್ಕರ್. ಹೆಂಡತಿ ಪಾತ್ರೆಗಳನ್ನು ಕುಕ್ಕುವುದರಿಂದ ಪ್ರೆಷರ್ ಕುಕ್ಕರ್. ಇವರಿಬ್ಬರ ನಡುವೆ ಬಡವಾಗುವ ಮಕ್ಕಳು ಪಿಜೆನ್ ಮತ್ತು ಬಟರ್‌ಫ್ಲೈ` ಎಂದು ವೈ.ವಿ.ಗುಂಡೂರಾವ್ ಅವರ ಮಾತಿಗೆ ಜನರೆಲ್ಲ ಗೊಳ್ಳೆಂದು ನಕ್ಕರು.

`ಜೀವನದಲ್ಲಿ ಸದಾ ಸಂತೋಷದಿಂದ ಇರಬೇಕಾದರೆ ಯಾವಾಗಲೂ ಹಾಸ್ಯ ಪ್ರವೃತ್ತಿಯನ್ನು ಅಳವಡಿಸಿಕೊಳ್ಳಬೇಕು. ಸಂಸ್ಥೆ, ಸಮಾಜ ಮತ್ತು ಸಂಸಾರ ಈ ಮೂರು ಅಂಶಗಳು ಜೀವನದಲ್ಲಿ ಬಹುಮುಖ್ಯ ಪ್ರಾತ್ರ ವಹಿಸುತ್ತವೆ~ ಎಂದು ಹೇಳಿದರು.

ನಂತರ ನಡೆದ `ಗೀತ ಸಂಭ್ರಮ~ ಕಾರ್ಯಕ್ರಮದಲ್ಲಿ ವೈ.ಕೆ. ಮುದ್ದುಕೃಷ್ಣ, ಅರ್ಚನಾ ಉಡುಪ, ಕೆ.ಎಸ್.ಸುರೇಖ ಹಾಗೂ ಉದಯ ಅಂಕೋಲ ಅವರು ಗಾಯನ ಕಾಯರ್ರ್ಕ್ರಮ ನಡೆಸಿಕೊಟ್ಟರು. ವೇದಿಕೆ ಸದಸ್ಯರಿಂದ `ಕಸ್ತೂರಿ ಘಮಲು~ ಕಿರು ಪ್ರಹಸನ ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.