ADVERTISEMENT

ಪಾಸ್ಕಲ್ ಮುಜುರಿಯರ್ ಪರ ಜಾಥಾ

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 20:11 IST
Last Updated 16 ಜೂನ್ 2013, 20:11 IST
ಮಗಳ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಫ್ರಾನ್ಸ್ ಕಾನ್ಸುಲ್ ಜನರಲ್ ಕಚೇರಿಯ ಹಿರಿಯ ಅಧಿಕಾರಿ ಪಾಸ್ಕಲ್ ಮುಜುರಿಯರ್, ವಿಶ್ವ ಅಪ್ಪಂದಿರ ದಿನದ ಅಂಗವಾಗಿ `ಚೈಲ್ಡ್ ರೈಟ್ಸ್ ಇನಿಷಿಯೇಟಿವ್ ಫಾರ್ ಶೇರ್ಡ್‌ ಪೇರೆಂಟಿಂಗ್' (ಕ್ರಿಸ್ಪ್) ಸಂಸ್ಥೆಯು ನಗರದ ಪುರಭವನದ ಬಳಿ ಶನಿವಾರ ಹಮ್ಮಿಕೊಂಡಿದ್ದ ಜಾಥಾದಲ್ಲಿ ಪಾಲ್ಗೊಂಡಿದ್ದರು	-ಪ್ರಜಾವಾಣಿ ಚಿತ್ರ

ಬೆಂಗಳೂರು: ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿರುವ ಫ್ರಾನ್ಸ್ ಕಾನ್ಸುಲ್ ಜನರಲ್ ಕಚೇರಿಯ ಹಿರಿಯ ಅಧಿಕಾರಿ ಪಾಸ್ಕಲ್ ಮುಜುರಿಯರ್ ಅವರು ಶೀಘ್ರಗತಿಯಲ್ಲಿ ಕೋರ್ಟ್ ಕಲಾಪ ನಡೆದು ನ್ಯಾಯ ದೊರೆಯಬೇಕೆಂದು ಶನಿವಾರ ಆಗ್ರಹಿಸಿದರು.

`ಮಕ್ಕಳು ಸಂಪೂರ್ಣವಾಗಿ ತಂದೆಯ ಸುಪರ್ದಿಯಲ್ಲಿ ಇಲ್ಲದೇ ಇದ್ದರೂ ಆರೋಪ ಎದುರಿಸಿದ ಸಂದರ್ಭದಲ್ಲಿ ಕನಿಷ್ಠ ಮಕ್ಕಳನ್ನು ಭೇಟಿಯಾಗುವ ಅವಕಾಶ ನೀಡಬೇಕು.

ಮಕ್ಕಳ ಪಾಲನೆಯಲ್ಲಿ ತಂದೆಯ ಪಾತ್ರವೂ ಮುಖ್ಯವಿದೆ. ಇಲ್ಲದಿದ್ದರೆ ದೋಷಮುಕ್ತನಾದ ನಂತರ ಮಕ್ಕಳ ಪ್ರೀತಿಯನ್ನು ಕಳೆದುಕೊಳ್ಳುವ ಆತಂಕ ಕಾಡುತ್ತದೆ. ಮಕ್ಕಳಿಂದ ದೂರನಾಗಿ ಪರಕೀಯ ಭಾವನೆಯನ್ನು ಎದುರಿಸಬೇಕಾಗುತ್ತದೆ' ಎಂದು  ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ಯಾರೀಸ್‌ನ ವಕೀಲರಾದ ಒಲಿವರ್ ಸುರ್, `ತಂದೆಯನ್ನು ಭೇಟಿಯಾಗುವ ಹಕ್ಕು ಮಕ್ಕಳಿಗಿರುತ್ತದೆ. ಆದರೆ ಪಾಸ್ಕಲ್ ಪ್ರಕರಣದಲ್ಲಿ ತಾಯಿಯೇ ತನ್ನ ಮಕ್ಕಳಿಗೆ ಈ ಅವಕಾಶವನ್ನು ನೀಡಿರಲಿಲ್ಲ' ಎಂದು ತಿಳಿಸಿದರು.ಕ್ಲೆಮೆನ್ಸ್ ವಿಟ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT