ADVERTISEMENT

ಪೀಣ್ಯ ಬಸ್‌ ನಿಲ್ದಾಣಕ್ಕೆ ಎಸ್ಕಲೇಟರ್‌ ನಡಿಗೆ ಪಥ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:41 IST
Last Updated 2 ಮಾರ್ಚ್ 2018, 19:41 IST

ಬೆಂಗಳೂರು: ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಿಂದ ಬಸ್‌ಗಳ ಸಂಚಾರವನ್ನು ಮತ್ತೆ ಆರಂಭಿಸಲು ಕೆಎಸ್‌ಆರ್‌ಟಿಸಿ ಸಿದ್ಧತೆ ನಡೆಸಿದೆ.

‘ಎರಡು ವರ್ಷಗಳ ಹಿಂದೆ ಈ ನಿಲ್ದಾಣದಿಂದ ಬಸ್‌ಗಳ ಸಂಚಾರ ಆರಂಭಿಸಲಾಗಿತ್ತು. ಸಾರಿಗೆ ಸಂಸ್ಥೆಗೆ ಭಾರಿ ನಷ್ಟ ಉಂಟಾಗಿತ್ತು. ಆದರೆ, ಈಗ ಮೆಟ್ರೊ ಸಂಪರ್ಕ ಅಭಿವೃದ್ಧಿಗೊಂಡಿರುವುದರಿಂದ ಸಮಸ್ಯೆ ಆಗುವುದಿಲ್ಲ’  ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್ ಹೇಳಿದರು.

‘ಮೆಟ್ರೊ ನಿಲ್ದಾಣದಿಂದ ಪೀಣ್ಯ ಬಸ್‌ ನಿಲ್ದಾಣಕ್ಕೆ 800 ಮೀಟರ್‌ ಇದೆ. ಜನರಿಗೆ ಅನುಕೂಲವಾಗಲೆಂದು ಮೆಟ್ರೊ ನಿಲ್ದಾಣದಿಂದ ಎಸ್ಕಲೇಟರ್‌ ನಡಿಗೆ ಪಥ ನಿರ್ಮಿಸಲಾಗುವುದು. ಜೊತೆಗೆ ಜಾಲಹಳ್ಳಿ ಕ್ರಾಸ್‌ನಿಂದ ಬಸ್‌ ನಿಲ್ದಾಣಕ್ಕೆ ಉಚಿತವಾಗಿ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗುವುದು’ ಎಂದರು.

ADVERTISEMENT

ಅಂಕಿ ಅಂಶ (₹ಕೋಟಿಗಳಲ್ಲಿ)

3,164 -ಪ್ರಸಕ್ತ ವರ್ಷದ ಒಟ್ಟು ಆದಾಯ

3,154 -ಕಾರ್ಯಾಚರಣೆ ವೆಚ್ಚ

2,833 -ಕಳೆದ ವರ್ಷದ ಆದಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.