ADVERTISEMENT

‘ಪುರಸ್ಕಾರ ಪಡೆದವರು ಮತ್ತೊಬ್ಬರಿಗೆ ನೆರವಾಗಿ’

​ಪ್ರಜಾವಾಣಿ ವಾರ್ತೆ
Published 9 ಜುಲೈ 2017, 18:51 IST
Last Updated 9 ಜುಲೈ 2017, 18:51 IST
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಎನ್‌.ಎಸ್‌. ನಟರಾಜು, ಮಹಿಳಾ ಘಟಕದ ಅಧ್ಯಕ್ಷೆ ರಾಜಮ್ಮ, ಕಾರ್ಯದರ್ಶಿ ಪೂರ್ಣಿಮಾ, ಮಲಯ ಶಾಂತಮುನಿ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಕಾರ್ಯದರ್ಶಿ ದಯಾಶಂಕರ್‌, ಯುವಘಟಕದ ಅಧ್ಯಕ್ಷ ಎನ್‌.ರಾಜಶೇಖರ್‌ ಇದ್ದಾರೆ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಎನ್‌.ಎಸ್‌. ನಟರಾಜು, ಮಹಿಳಾ ಘಟಕದ ಅಧ್ಯಕ್ಷೆ ರಾಜಮ್ಮ, ಕಾರ್ಯದರ್ಶಿ ಪೂರ್ಣಿಮಾ, ಮಲಯ ಶಾಂತಮುನಿ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಕಾರ್ಯದರ್ಶಿ ದಯಾಶಂಕರ್‌, ಯುವಘಟಕದ ಅಧ್ಯಕ್ಷ ಎನ್‌.ರಾಜಶೇಖರ್‌ ಇದ್ದಾರೆ   

ನೆಲಮಂಗಲ: ‘ಗುರುಗಳಿಲ್ಲದ ಸಮಾಜ ನೆನೆಸಿಕೊಳ್ಳುವುದು ಕಷ್ಟ. ಅಂಥ ಸಮಾಜ ಅಭಿವೃದ್ಧಿ ಹೊಂದಲು ಎಂದಿಗೂ ಸಾಧ್ಯವಿಲ್ಲ’ ಎಂದು ಬಸವಣ್ಣದೇವರ ಮಠದ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಅಖಿಲ ಭಾರತ ವೀರಶೈವ ಮಹಾ ಸಭಾ ಗ್ರಾಮಾಂತರ ಜಿಲ್ಲಾ ಘಟಕ, ರುದ್ರೇಶ್ವರ ಕ್ರೆಡಿಟ್‌ ಕೊ ಆಪರೆಟಿವ್‌ ಸೊಸೈಟಿ, ರುದ್ರೇಶ್ವರ ದೇವಾಲಯ ಟ್ರಸ್ಟ್‌ ಸಂಯುಕ್ತಾಶ್ರಯದಲ್ಲಿ ಜಯದೇವ ವೀರಶೈವ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ಕಷ್ಟಪಟ್ಟಾದರೂ ಸರಿ. ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವುದರಿಂದ ಪುರಸ್ಕಾರ ಪಡೆಯುತ್ತಾರೆ. ಅಂಥ  ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು’ ಎಂದರು.

ADVERTISEMENT

ಮೇಲಣಗವಿ ಮಠದ ಮಲಯ ಶಾಂತಮುನಿ ಸ್ವಾಮೀಜಿ, ‘ವಿದ್ಯಾರ್ಥಿಗಳ ಸಾಧನೆಯಿಂದ ಪೋಷಕರ ಕನಸು ಅಷ್ಟೇ ಅಲ್ಲದೆ ಸಮಾಜದ ಕನಸು ನನಸಾಗಿದೆ. ವೀರಶೈವ ಧರ್ಮದ ಆಚರಣೆಗಳನ್ನು ಮಕ್ಕಳಿಗೆ ಚಿಕ್ಕಂದಿನಿಂದಲೆ ಪೋಷಕರು ಕಲಿಸಬೇಕು, ಇಷ್ಠಲಿಂಗ ಪೂಜೆಯ ಅದ್ಭುತ ವೈಜ್ಞಾನಿಕ ಶಕ್ತಿಯನ್ನು ತಿಳಿಸಿಕೊಡಬೇಕು’ ಎಂದರು.

ಮಹಾ ಸಭಾದ ಜಿಲ್ಲಾಧ್ಯಕ್ಷ ಎನ್‌.ಎಸ್‌. ನಟರಾಜು, ‘16 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಸಹಕರಿಸುತ್ತೇವೆ’ ಎಂದು ಹೇಳಿದರು.

ಜಿಲ್ಲೆಯ 175 ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ 85 ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಇದೇ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.