ADVERTISEMENT

ಪೊಲೀಸ್‌ ಪ್ರಧಾನ ಕಚೇರಿ ಕಟ್ಟಡದಿಂದ ಬಿದ್ದು ಸಾವು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2014, 20:24 IST
Last Updated 3 ಫೆಬ್ರುವರಿ 2014, 20:24 IST
ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯ ಕಟ್ಟಡದ ಏಳನೇ ಅಂತಸ್ತಿನಲ್ಲಿ  ಸೋಮವಾರ ಹವಾನಿಯಂತ್ರಣ ಸಾಧನ ರಿಪೇರಿ ಮಾಡುತ್ತಿದ್ದ ದೀಪಕ್‌ಕುಮಾರ್‌ ಎಂಬ ಕಾರ್ಮಿಕ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಸ್ಥಳವನ್ನು ಸಿಬ್ಬಂದಿ ವೀಕ್ಷಿಸಿದರು
ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯ ಕಟ್ಟಡದ ಏಳನೇ ಅಂತಸ್ತಿನಲ್ಲಿ ಸೋಮವಾರ ಹವಾನಿಯಂತ್ರಣ ಸಾಧನ ರಿಪೇರಿ ಮಾಡುತ್ತಿದ್ದ ದೀಪಕ್‌ಕುಮಾರ್‌ ಎಂಬ ಕಾರ್ಮಿಕ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಸ್ಥಳವನ್ನು ಸಿಬ್ಬಂದಿ ವೀಕ್ಷಿಸಿದರು   

ಬೆಂಗಳೂರು:  ನಗರದ ನೃಪತುಂಗ ರಸ್ತೆ­ಯಲ್ಲಿರುವ ರಾಜ್ಯ ಪೊಲೀಸ್‌ ಮಹಾ­ನಿರ್ದೇಶಕರ ಕಚೇರಿಯ ಕಟ್ಟಡ ದಲ್ಲಿ ಸೋಮವಾರ ಮಧ್ಯಾಹ್ನ ಹವಾ ನಿಯಂ ತ್ರಣ ಸಾಧನ ರಿಪೇರಿ ಮಾಡುತ್ತಿದ್ದ ದೀಪಕ್‌ ಕುಮಾರ್‌ (18) ಎಂಬ ಕಾರ್ಮಿಕ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ.

ದೇವರಜೀವನಹಳ್ಳಿ ಸಮೀಪದ ಅಂಬೇಡ್ಕರ್‌ನಗರದ ದೀಪಕ್‌ಕುಮಾರ್‌ ನ್ಯೂ ಬಿಇಎಲ್‌ ರಸ್ತೆಯಲ್ಲಿರುವ ಫ್ರೀಜ್‌ ಪಾಯಿಂಟ್‌ ಎಂಜಿನಿಯರ್‌್ಸ್ ಕಂಪೆನಿ ಯಲ್ಲಿ ಕೆಲಸ ಮಾಡುತ್ತಿದ್ದ.

ಪೊಲೀಸ್‌ ಮಹಾನಿರ್ದೇಶಕರ ಕಚೇರಿಯ ಕಟ್ಟಡದ ಹವಾನಿಯಂತ್ರಣ ಸಾಧನಗಳ ರಿಪೇರಿ ಕೆಲಸವನ್ನು ಫ್ರೀಜ್‌ ಪಾಯಿಂಟ್‌ ಎಂಜಿನಿಯರ್‌್ಸ್ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. ಆ ಕಂಪೆನಿಯ ಕೆಲಸಗಾರರು ಕಳೆದ ಐದು ದಿನಗಳಿಂದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದೀಪಕ್‌ಕುಮಾರ್‌, ಕಟ್ಟಡದ ಏಳನೇ ಅಂತಸ್ತಿನ ಕೊಠಡಿಯೊಂದರ ಹೊರಗೆ ಅಳವಡಿಸಿರುವ ಹವಾನಿಯಂತ್ರಣ ಸಾಧನ ರಿಪೇರಿ ಮಾಡುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತ ಪಟ್ಟಿದ್ದಾನೆ ಎಂದು ಪೊಲೀಸರು ಹೇಳಿ ದ್ದಾರೆ. ಘಟನೆ ಸಂಬಂಧ ಹಲ ಸೂರು ಗೇಟ್‌ ಪೊಲೀಸರು ಹವಾನಿಯ ಂತ್ರಣ ಸಾಧನಗಳ ರಿಪೇರಿ ಕೆಲಸದ ಗುತ್ತಿಗೆದಾ ರನ ವಿರುದ್ಧ ನಿರ್ಲಕ್ಷ್ಯ ಆರೋ ಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.