ADVERTISEMENT

ಪ್ರಸ್ತಾವಿತ ಅರಣ್ಯ ನೀತಿ ಬದಲಾವಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST

ಬೆಂಗಳೂರು: ಕೇಂದ್ರ ಸರ್ಕಾರದ ಪ್ರಸ್ತಾವಿತ ಅರಣ್ಯ ನೀತಿಯಲ್ಲಿ ಕೆಲ ಬದಲಾವಣೆಗೆ ಕರ್ನಾಟಕ ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಆಗ್ರಹಿಸಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಮದನಗೋಪಾಲ್‌ ಮಾತನಾಡಿ, ‘ಅಳಿವಿನ ಅಂಚಿನಲ್ಲಿರುವ ಅರಣ್ಯ, ಬಯಲು ಪ್ರದೇಶಗಳಲ್ಲಿ ಗಿಡ ಮರ ಬೆಳೆಸಲು, ಸಂರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ಗ್ರಾಮ ಸಭೆ ಸುಪರ್ದಿಗೆ ನೀಡಬೇಕು. 2006 ಅರಣ್ಯ ಕಾಯ್ದೆಗೂ ನೂತನ ಕರಡಿನಲ್ಲಿ ಮಹತ್ವ ನೀಡಬೇಕು,
ಖಾಸಗಿಯವರಿಗೆ ಅಧಿಕಾರ ನೀಡದೆ ಅರಣ್ಯ ಇಲಾಖೆಯೇ ಹೊಣೆಗಾರಿಕೆ ಹೊಂದಬೇಕು. ಸ್ಥಳೀಯ ಅರಣ್ಯ ನಿವಾಸಿಗಳಿಗೇ ಗಿಡ ಬೆಳೆಸುವ, ಸಂರಕ್ಷಣೆ ಮಾಡುವ, ಉದ್ಯೋಗ ಕಲ್ಪಿಸುವ ಬಗ್ಗೆ ಮಹತ್ವ ನೀಡಬೇಕು. ಕಾಡಿನಲ್ಲಿರುವ ಮಾನವ ಸಂಪನ್ಮೂಲ, ಪ್ರಾಣಿ, ಜೀವವೈವಿಧ್ಯಗಳನ್ನು ಕಾಡಿನಲ್ಲೇ ಉಳಿಸಿಕೊಳ್ಳುವ ನೀತಿಯ ಪಾಲನೆ ಆಗಬೇಕು’ ಎಂದರು.

‘ಕರಡು ನೀತಿಯ ಬಗ್ಗೆ ಆಕ್ಷೇಪ ಸಲ್ಲಿಸಲು ಒಂದೇ ತಿಂಗಳು ಅವಕಾಶ ನೀಡಲಾಗಿತ್ತು. ಹೊಸ ನೀತಿ ಬಂದಿದೆ ಎನ್ನುವುದೇ ಅನೇಕರಿಗೆ ಗೊತ್ತಾಗಲಿಲ್ಲ. ಆಕ್ಷೇಪಣೆಯ ಅವಧಿಯನ್ನು ವಿಸ್ತರಿಸಬೇಕು. ಆಂಗ್ಲ ಭಾಷೆಯಲ್ಲಿರುವ ಕರಡನ್ನು ಕನ್ನಡಕ್ಕೆಅನುವಾದಿಸಬೇಕು. ಸಾರ್ವಜನಿಕವಾಗಿ, ಗ್ರಾಮ ಹಾಗೂ ಪಂಚಾಯಿತಿ ಮಟ್ಟದಲ್ಲಿ ಚರ್ಚೆ ನಡೆಸಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.